ಚಿಕ್ಕಮಗಳೂರಲ್ಲೊಂದು ಮನಕಲಕುವ ಘಟನೆ : ಪತಿ ಮೃತದೇಹದ ಜೊತೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಮಹಿಳೆ – ಕಹಳೆ ನ್ಯೂಸ್

ಚಿಕ್ಕಮಗಳೂರು: ಗಂಡ ಸತ್ತು 10 ದಿನ ಕಳೆದು ಮೃತದೇಹ ಹುಳ ಬಿದ್ದರೂ ಮಾನಸಿಕ ಅಸ್ವಸ್ಥ ಪತ್ನಿ ಶವದ ಜೊತೆಯೇ ಇದ್ದ ಹೃದಯವಿದ್ರಾವಕ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದಲ್ಲಿ ನಡೆದಿದೆ.
ವಾಸನೆ ಬಂದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ನನ್ನ ಗಂಡ ನನಗೆ ಬೇಕು, ಅವರನ್ನ ಕರೆದೊಯ್ಯುಬೇಡಿ ಎಂದು ಮಹಿಳೆ ಅಂಗಲಾಚಿದ ದೃಶ್ಯ ನಿಜಕ್ಕೂ ಕರುಳು ಹಿಂಡುವಂತಿತ್ತು. ಬಣಕಲ್ ಗ್ರಾಮದ ನಿವಾಸಿ ಸಿರಿಲ್ ಮೋನಿಸ್ (77) 10 ದಿನಗಳ ಹಿಂದೆಯೇ ಅನಾರೋಗ್ಯದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಆದರೆ, ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ ಪತಿ ಸಾವನ್ನಪ್ಪಿರುವುದು ತಿಳಿಯದೆ ಹತ್ತು ದಿನಗಳ ಕಾಲ ಕೊಳೆತು ಹುಳ ಬಿದ್ದಿದ್ದ ಶವದ ಜೊತೆಯಲ್ಲೇ ವಾಸವಾಗಿದ್ದರು.











