ವಿ ಮೀಡಿಯಾ ಮತ್ತು ನಮಸ್ತೆ ರೆಸಾರ್ಟ್ ಸಹಯೋಗದಿಂದ ಕಾಂಟೆಂಟ್ ಕ್ರಿಯೇಟರ್ ಮತ್ತು ಮಾಡೆಲ್ ಮೀಟ್-ಅಪ್-2026 – ಕಹಳೆ ನ್ಯೂಸ್

ವಿ ಮೀಡಿಯಾ ಮತ್ತು ನಮಸ್ತೆ ರೆಸಾರ್ಟ್ ಸಹಯೋಗದಿಂದ ಕಾಂಟೆಂಟ್ ಕ್ರಿಯೇಟರ್ ಮತ್ತು ಮಾಡೆಲ್ ಮೀಟ್ – ಅಪ್ 2026ಮೀಡಿಯಾ ಮತ್ತು ನಮಸ್ತೆ ರೆಸಾರ್ಟ್ ಸಹಯೋಗದಿಂದ ಕಾಂಟೆಂಟ್ ಕ್ರಿಯೇಟರ್ ಮತ್ತು ಮಾಡೆಲ್ ಮೀಟ್ ಕಾಪು ನಮಸ್ತೆ ರೆಸಾರ್ಟ್ ನಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಮಸ್ತೆ ರೆಸಾರ್ಟ್ ನ ಮಾಲೀಕರಾದ ಶ್ರೀ ರಾಜೇಶ್ ಸಿ ಮತ್ತು ವಿನೋದ್ ಹಾಗೂ ಚಲನ ಚಿತ್ರ ನಟ ಅಲೋಕ್ ಹಾಗೂ ವಿ ಮೀಡಿಯಾ ದ ರಕ್ಷಿತ್ ಬೆಳ್ಮಣ್ ಉಪಸ್ಥಿತರಿದ್ದರು. ಹಾಗೂ ಈ ಕಾರ್ಯಕ್ರಮವನ್ನು ವಾಣಿ ಕದ್ರಿ ರವರು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ನಮಸ್ತೆ ರೆಸಾರ್ಟ್ ನ ಹೊಸ ಎರಡು ಆಯೋಜನೆಗಳಾದ ಕ್ಯಾಂಡಲ್ ಲೈಟ್ ಡಿನ್ನರ್ ಹಾಗೂ ಬರ್ತಡೇ ಸೆಲೆಬ್ರೇಷನ್ ಪ್ಯಾಕೇಜ್ ಅನ್ನು ಪೋಸ್ಟರ್ ಮೂಲಕ ಬಿಡುಗಡೆ ಮಾಡಲಾಯಿತು.. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಕಂಟೆಂಟ್ ಕ್ರಿಯೇಟರ್ ಮತ್ತು ಮಾಡೆಲ್ ಗಳಾದ ಸಿಂಚನ , ಮೈಕ್ – ಮಾನ್ ಪ್ರಜ್ವಲ್ , ಐಶ್ವರ್ಯ , ವಿಖ್ಯಾತ, ಜೊಎಲ್, ಯಜ್ಞೇಶ್, ದೀಕ್ಷಿತ್ , ಯಶ್ವಿತ್ ಪ್ರಮುಖರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಸಹಪ್ರಯೋಜಕರಾಗಿ ಬಾಟಾ ಶೋ ರೂಮ್ ಪಡುಬಿದ್ರಿ ಮತ್ತು ಕೆನ್ಕೊ ಡ್ರೈ ಫ್ರೂಟ್ಸ್ ಮುಲ್ಕಿ ಇವರು ಸಹಕರಿಸಿದರು.











