ಭೂಗತ ತೈಲಾಗಾರಕ್ಕೆ ಚೀನದಿಂದ ಕಚ್ಚಾ ತೈಲ ತಂದ ಲೀಲಾ ಜಾಮ್ನಗರ್ ನೌಕೆ -ಕಹಳೆ ನ್ಯೂಸ್

ಮಂಗಳೂರು: ನವಮಂಗಳೂರು ಬಂದರಿಗೆ ಚೀನದಿಂದ 2.7 ಲಕ್ಷ ಮೆ. ಟನ್ ಕಚ್ಚಾ ತೈಲವನ್ನು ಹೇರಿಕೊಂಡು ಲೀಲಾ ಜಾಮ್ ನಗರ್ ಎನ್ನುವ ಹಡಗು ಆಗಮಿಸಿದೆ.
ಇದು ಚೀನದ ಜೌಶಾನ್ ಬಂದರಿನಿಂದ ಆಗಮಿಸಿದ್ದು, ಕಚ್ಚಾ ತೈಲವನ್ನು ಮಂಗಳೂರಿನ ಐಎಸ್‌ಪಿಆರ್‌ಎಲ್ ಭೂಗತ ತೈಲಾಗಾರಕ್ಕೆ ಪೂರೈಸುವ ನಿರೀಕ್ಷೆ ಇದೆ. ಈಗಾಗಲೇ 19,600 ಮೆ. ಟನ್ ಎಲ್‌ಪಿಜಿಯೊಂದಿಗೆ ಅಲ್ ಐನ್ ಎನ್ನುವ ನೌಕೆಯೂ ಬಂದರಿಗೆ ಬಂದಿದೆ.
ಅಲ್ಲದೆ ಎ. 3ರಂದು ಎಂಆರ್‌ಪಿಎಲ್‌ಗೆ 63,171 ಮೆ. ಟನ್ ರಾಜಸ್ತಾನದ ಮಂಗಳಾ ಕಚ್ಚಾ ತೈಲ ಹೇರಿಕೊಂಡು ದೇಶ್ ಭಕ್ತ್ ನೌಕೆ ಆಗಮಿಸಲಿದೆ. ಎ. 5ರಂದು ಹಿಂದುಸ್ತಾನ್ ಪೆಟ್ರೋಲಿಯಂ, ಐಒಸಿ ಹಾಗೂ ಬಿಪಿಸಿಗೆ 9,500 ಮೆ. ಟನ್ ಎಲ್‌ಪಿಜಿಯೊಂದಿಗೆ ಜಗ್ ವಸಂತ್ ಎನ್ನುವ ನೌಕೆ ಬರಲಿದೆ.
ಎಂಆರ್‌ಪಿಎಲ್‌ಗೆ 2,75,021 ಮೆ. ಟನ್ ಕಚ್ಚಾ ತೈಲದೊಂದಿಗೆ ಎ. 5ರಂದು ಗ್ಯಾಬನ್ ಪ್ರಾಸ್ಪೆರಿಟಿ ಎನ್ನುವ ಬೃಹತ್ ನೌಕೆಯೂ ಮಂಗಳೂರಿಗೆ ಆಗಮಿಸಲಿದೆ.









