Friday, April 24, 2026
ಸುದ್ದಿ

ಪ್ರಭು ಚರುಂಬುರಿ ಇನ್ಮುಂದೆ ಪ್ರಭು’ಸ್‌ ಚರುಂಬುರಿ : ಮಾ. 28ರಂದು ‘ಪ್ರಭು’ಸ್ ಚರುಂಬುರಿ ಅಂಡ್ ಚಾಟ್ಸ್’ ಆಗಿ ಮರು ಲೋಕಾರ್ಪಣೆ – ಕಹಳೆ ನ್ಯೂಸ್

ಪುತ್ತೂರು: ನಗರದ ಪ್ರಸಿದ್ಧ ಪ್ರಭು ಚರುಂಬುರಿ ಇದೀಗ ಹೊಸತನದ ಸ್ಪರ್ಶದೊಂದಿಗೆ ‘ಪ್ರಭು’ಸ್ ಚರುಂಬುರಿ ಅಂಡ್ ಚಾಟ್ಸ್’ ಎಂಬ ಬ್ರಾಂಡ್ ನೇಮ್ ಜತೆಗೆ ಮಾರ್ಚ್ 28ರಂದು ಸಮಾಜಕ್ಕೆ ಸಮರ್ಪಣೆಗೊಳ್ಳಲಿದೆ
ಕಳೆದ ಎರಡೂವರೆ ದಶಕಗಳಿಂದ ಪ್ರಭು ಚರುಂಬುರಿ ಪುತ್ತೂರಿನಾದ್ಯಂತ ಹೆಸರುವಾಸಿಯಾಗಿ ದಿನೇ ದಿನೇ ಹೆಚ್ಚಿನ ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಲೇ ಬಂದಿದೆ. ಆರಂಭದಲ್ಲಿ ಪುತ್ತೂರಿನ ಶ್ರೀಧರ ಭಟ್ ವಾಣಿಜ್ಯ ಕೇಂದ್ರದ ಎದುರು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಭು ಚರುಂಬುರಿ ತದನಂತರ ಕಳೆದ ಆರು ವರ್ಷಗಳಿಂದ ಕೊಂಬೆಟ್ಟಿನ ಜಿ.ಎಲ್. ಟ್ರೇಡ್ ಸೆಂಟರ್‌ನಲ್ಲಿ ತುಸು ವಿಸ್ತಾರವಾಗಿ ಜನರನ್ನು ಸೆಳೆಯುವ ತಾಣವಾಗಿ ರೂಪುಗೊಂಡಿದೆ
ಇತ್ತೀಚೆಗಿನ ವರ್ಷಗಳಲ್ಲಿ ಈ ಮಳಿಗೆ ಕೇವಲ ಚರುಂಬುರಿಗಷ್ಟೇ ಮೀಸಲಾಗಿರದೆ ನಾನಾ ಬಗೆಯ ಖಾದ್ಯಗಳು, ಪಾನೀಯಗಳಲ್ಲದೆ ಫಾಸ್ಟ್ ಫುಡ್ ಸೆಂಟರ್ ಆಗಿಯೂ ಜನಮನ ಸೂರೆಗೊಳ್ಳಲಾರಂಭಿಸಿದೆ. ಹಾಗಾಗಿ ದಿನದಲ್ಲಿ ಒಂದು ಸಂತಸದ ಕ್ಷಣಗಳನ್ನು ಕಳೆಯುವುದಕ್ಕೆಂದೇ ಅನೇಕರು ಇಲ್ಲಿಗೆ ಭೇಟಿ ಕೊಟ್ಟು ಬದುಕಿನ ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮದುವೆ ಮುಂಜಿ ಮೊದಲಾದ ಕಾರ್ಯಕ್ರಮಗಳಿಗೂ ಈ ಮಳಿಗೆಯಿಂದಲೇ ಚರುಂಬುರಿ, ವಿವಿಧ ಬಗೆಯ ಫಾಸ್ಟ್ ಫುಡ್ ಹಾಗೂ ಪಾನೀಯಗಳು ಸರಬರಾಜಾಗುತ್ತಿವೆ. ಹೀಗೆ ಕೇವಲ ಚರುಂಬುರಿಯಷ್ಟೇ ಅಲ್ಲದೆ ಸಮಗ್ರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಮಳಿಗೆ ಇದೀಗ ‘ಪ್ರಭು’ಸ್ ಚರುಂಬುರಿ ಅಂಡ್ ಚಾಟ್ಸ್” ಎಂಬ ನೂತನ ಬ್ರಾಂಡ್ ನೇಮ್ ಜತೆಗೆ ಪ್ರಸ್ತುತಗೊಳ್ಳುತ್ತಿದೆ.

ಮಾರ್ಚ್ 28ರಂದು ಬೆಳಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಚಿತ್ರನಟ, ತುಳುನಾಡಿನ ಜನಪ್ರಿಯ ಕಲಾವಿದ ಅರವಿಂದ ಬೋಳಾರ್ ‘ಪ್ರಭು’ಸ್ ಚರುಂಬುರಿ ಅಂಡ್ ಚಾಟ್ಸ್’ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಭು’ಸ್ ಮಾಲಕ ರಾಜೇಶ್ ಪ್ರಭು, ನಿರ್ವಾಹಕ ಆದರ್ಶ ವಿ. ಹಾಗೂ ಹಲವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು