ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 7 ಮರಿಗಳ ತಾಯಿಯಾದ ಭಾರತೀಯ ತೋಳ “ಗೀತಾ” : ಭಾರತೀಯ ತೋಳಗಳ ಸಂತಾನೋತ್ಪತ್ತಿಯಲ್ಲಿ ಹೊಸ ಮೈಲಿಗಲ್ಲು! -ಕಹಳೆ ನ್ಯೂಸ್

ಮಂಗಳೂರು : ನಗರದ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸಂತಸದ ವಾತಾವರಣ ಮನೆಮಾಡಿದೆ. ಇಲ್ಲಿನ ‘ಗೀತಾ’ ಎಂಬ ಹೆಸರಿನ ಭಾರತೀಯ ತೋಳ (Indian Wolf) ಒಂದೇ ಬಾರಿಗೆ ಏಳು ಮರಿಗಳಿಗೆ ಜನ್ಮ ನೀಡುವ ಮೂಲಕ ಗಮನ ಸೆಳೆದಿದೆ.
ಜನಿಸಿದ ಏಳು ಮರಿಗಳಲ್ಲಿ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮರಿಗಳಿವೆ. ಕಳೆದ 3 ವರ್ಷಗಳಿಂದ ಪಿಲಿಕುಳದಲ್ಲಿ ಭಾರತೀಯ ತೋಳಗಳನ್ನು ಪೋಷಿಸಲಾಗುತ್ತಿದೆ. ಇದು ಇಲ್ಲಿ ನಡೆದ ತೋಳಗಳ ಮೊದಲ ಯಶಸ್ವಿ ಸಂತಾನೋತ್ಪತ್ತಿಯಾಗಿದೆ.
ತಾಯಿ ತೋಳ ಮತ್ತು ಎಲ್ಲಾ ಮರಿಗಳು ಸಂಪೂರ್ಣ ಆರೋಗ್ಯವಾಗಿದ್ದು, ಪಶುವೈದ್ಯರು ಹಾಗೂ ಪ್ರಾಣಿ ಪಾಲಕರು ಇವುಗಳ ಮೇಲೆ ನಿರಂತರ ನಿಗಾ ಇರಿಸಿದ್ದಾರೆ. ಮರಿಗಳು ಈಗ ಅರೋಗ್ಯ ವಾಗಿ ಓಡಾಡುತ್ತಿದ್ದು, ಅವುಗಳನ್ನು ಸಂದರ್ಶಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ















