
ತಿರುವನಂತಪುಂ ನಾರ್ತ್-ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವೀಕ್ಲಿ ಸ್ಪೆಷಲ್ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಖಾಯಂಗೊಳಿಸಲಾಗಿದೆ.
ತಿರುವನಂತಪುರಂ ನಾರ್ತ್-ಮಂಗಳೂರು ಜಂಕ್ಷನ್ ವೀಕ್ಲಿ ಸ್ಪೆಷಲ್ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲು (06313) ಮಾ. 16ರಿಂದ ಖಾಯಂ ರೈಲು (16313) ಆಗಿ ಸಂಚರಿಸುತ್ತಿದೆ. ಮಂಗಳೂರು ಜಂಕ್ಷನ್-ತಿರುವನಂತಪುರಂ ನಾರ್ತ್ ವೀಕ್ಲಿ ಸ್ಪೆಷಲ್ ಅಂತ್ಯೋದಯ ಎಕ್ಸ್‌ಪ್ರೆಸ್ (06314) ಮಾ. 17ರಿಂದ ಖಾಯಂ ರೈಲು (16314) ಆಗಿ ಸಂಚರಿಸಲಿದೆ. ಈ ರೈಲು ತಿರುವನಂತಪುರಂ ನಾರ್ತ್ ನಿಲ್ದಾಣದಿಂದ ಪ್ರತಿ ಸೋಮವಾರ ಸಂಜೆ 5.15ಕ್ಕೆ ಹೊರಟು ಮಂಗಳವಾರ ಬೆಳಗ್ಗೆ 6.50ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್‌ನಿಂದ ಪ್ರತಿ ಮಂಗಳವಾರ ಸಂಜೆ 6 ಗಂಟೆಗೆ ಹೊರಟು ಬುಧವಾರ ಬೆಳಗ್ಗೆ 7.15ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.
ಮೆಮು ರೈಲಿನ ಸಮಯ ಬದಲಾವಣೆ: ಮಂಗಳೂರು ಸೆಂಟ್ರಲ್-ಮಡ್ತಾಂವ್ ನಡುವೆ ಸಂಚರಿಸುವ ಮೆಮು ಎಕ್ಸ್‌ಪ್ರೆಸ್ ರೈಲಿನ ಸಂಚಾರದ ಸಮಯ ಬದಲಾವಣೆಯಾಗಿದೆ. ಈ ರೈಲು (10108) ಪ್ರಸ್ತುತ ಮಡ್ತಾಂವ್ ಜಂಕ್ಷನ್ ನಿಂದ ರಾತ್ರಿ 10.20ಕ್ಕೆ ಹೊರಡುತ್ತಿತ್ತು. ಮಾ.18ರಿಂದ ರಾತ್ರಿ 10.35ಕ್ಕೆ ಹೊರಡಲಿದೆ ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.














