ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ- ಕಹಳೆ ನ್ಯೂಸ್

ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

ಮದುವೆ ಬಳಿಕ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಜಯ್ ಅವರನ್ನು ತಮ್ಮ ಪತಿ ಎಂದು ಪ್ರೀತಿಯಿಂದ ಪರಿಚಯಿಸಿದ್ದಾರೆ. ‘ನಿಜವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ಕಲಿಸಿದ ವ್ಯಕ್ತಿ, ಶಾಂತಿಯಿಂದ ಇರುವುದು ಹೇಗಿರುತ್ತದೆ ಎಂದು ನನಗೆ ತೋರಿಸಿದ ವ್ಯಕ್ತಿ!… ನಾನು ಯಾವಾಗಲೂ ಕನಸು ಕಂಡ ಹೆಣ್ಣು. ಏಕೆಂದರೆ, ನೀವು ನಾನು ನಾನಗಿರುವಂತೆ ಮಾಡಿದ್ದೀರಿ! ನನಗೆ ಆಶೀರ್ವಾದ ಸಿಕ್ಕಿದೆ. ನಾನು ನಿಮ್ಮ ಹೆಂಡತಿಯಾಗಿರುವುದು ಖುಷಿ ಕೊಟ್ಟಿದೆ. ಒಟ್ಟಿಗೆ ಸುಖಕರ ಜೀವನ ಹೊಂದೋಣ! ನಾನು ನಿನ್ನನ್ನು ಪ್ರೀತಿಸುತ್ತೇನೆ!’ ಎಂದು ಬರೆದುಕೊಂಡಿದ್ದಾರೆ.
ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಅವರಿಗಾಗಿ ಪ್ರೀತಿಯ ಸಂದೇಶ ಹಂಚಿಕೊಂಡಿದ್ದಾರೆ. ‘ಆಕೆ ಹತ್ತಿರದಲ್ಲಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ಅವಳನ್ನು ಮಿಸ್ ಮಾಡಿಕೊಂಡೆ… ನನಗೆ ಅವಳ ಸಾಂಗತ್ಯ ಅಗತ್ಯವಿತ್ತು. ನಾನು ಎಲ್ಲೇ ಇದ್ದರೂ ಮನೆಯಲ್ಲಿರುವ ಭಾವನೆ ಮತ್ತು ಶಾಂತತೆಯನ್ನು ಆಕೆಯಿಂದ ಅನುಭವಿಸಿದ್ದೇನೆ. ಹಾಗಾಗಿ, ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆ ಮಾಡಿಕೊಂಡೆ.
ಹಲವು ವರ್ಷಗಳಿಂದ ಕದ್ದು ಮುಚ್ಚಿ ಪ್ರೀತಿಸ್ತಾ ಇದ್ದ ಜೋಡಿ, ಇದೀಗ ಆಪ್ತರ ಮುಂದೆಯೇ ಹೊಸ ಜೀವನಕ್ಕೆ ಕಾಲಿಟ್ಟಿದೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಹಸೆಮಣೆ ಏರಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ನಡೆದ ಶುಭ ಮುಹೂರ್ತದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಈ ತಾರಾ ಮದ್ವೆಗೆ ಕೆಲವೇ ಕೆಲವು ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿತ್ತು. ಹಾಗಾಗಿ ಕುಟುಂಬಸ್ಥರು ಮತ್ತು ಆಪ್ತರು ಈ ಮದ್ವೆಗೆ ಸಾಕ್ಷಿಯಾಗಿದ್ದಾರೆ.














