Tuesday, March 10, 2026
ಸುದ್ದಿ

ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌- ಕಹಳೆ ನ್ಯೂಸ್

ಕೊಪ್ಪಳ: ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ ನೀಡಿ, ಹನುಮನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಹನುಮ ಜನ್ಮಸ್ಥಳದಲ್ಲಿ ‘ಜೈ ಹನುಮಾನ್’ ಚಿತ್ರಕ್ಕ ಮುಹೂರ್ತ ಸಿಕ್ಕಿದೆ. ಬೆಳಗ್ಗೆ 11:50ಕ್ಕೆ ಅಂಜನಾದ್ರಿಯಲ್ಲಿ ‘ಜೈ ಹನುಮಾನ್‌’ ತೆಲುಗು ಸಿನಿಮಾಗೆ ಮುಹೂರ್ತ ನೆರವೇರಿದೆ.  ಜೈ ಹನುಮಾನ್‌ ಚಿತ್ರದಲ್ಲಿ ಆಂಜನೇಯನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಮುಹೂರ್ತದಲ್ಲಿ ಭಾಗವಹಿಸಲು ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯು ಬೆಟ್ಟಕ್ಕೆ ಆಗಮಿಸಿದ್ದರು. ತೆಲುಗು ಚಿತ್ರ ನಿರ್ದೇಶಕ ಪ್ರಶಾಂತ್‌ ವರ್ಮ ನಿರ್ದೇಶನದ ಸಿನಿಮಾ ಇದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು