Wednesday, March 18, 2026
ಸುದ್ದಿ

ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ಕಳ್ಳತನ ಪ್ರಕರಣ: ಬಹುಭಾಷಾ ನಟ ಜಯರಾಮ್​ಗೆ ಎಸ್​ಐಟಿ ಗ್ರಿಲ್..​! – ಕಹಳೆ ನ್ಯೂಸ್

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ ಚಿನ್ನಾಭರಣಗಳ ನಾಪತ್ತೆ ಪ್ರಕರಣವು ಈಗ ಸಿನಿರಂಗ ಮತ್ತು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಬೃಹತ್ ಹಗರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಪ್ರೇಕ್ಷಕರಿಗೆ ಪರಿಚಿತರಾಗಿರುವ ಪ್ರಸಿದ್ಧ ನಟ ಜಯರಾಮ್ ಅವರ ಹೆಸರು ಸಹ ಈ ಪ್ರಕರಣದಲ್ಲಿ ಕೇಳಿಬಂದಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಚೆನ್ನೈನಲ್ಲಿರುವ ಜಯರಾಮ್ ಅವರ ನಿವಾಸಕ್ಕೆ ವಿಶೇಷ ತನಿಖಾ ತಂಡ ಭೇಟಿ ನೀಡಿ ದೀರ್ಘಕಾಲ ಅವರನ್ನು ವಿಚಾರಣೆ ನಡೆಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಉನ್ನಿ ಕೃಷ್ಣನ್ ಪೊಟ್ಟಿ ಮತ್ತು ಜಯರಾಮ್ ನಡುವಿನ ಸಂಬಂಧದ ಬಗ್ಗೆ ಅಧಿಕಾರಿಗಳು ವಿಚಾರಿಸಿದ್ದಾರೆ. ಪ್ರಸ್ತುತ ಇಡೀ ತನಿಖೆಯು ಉನ್ನಿ ಕೃಷ್ಣನ್ ಸುತ್ತ ಸುತ್ತುತ್ತಿದೆ. ಉನ್ನಿಕೃಷ್ಣನ್​ ಅವರು ಈ ಹಿಂದೆ ದೇವಾಲಯದ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಾಸ್ತವವಾಗಿ, 2019 ರಲ್ಲಿ ಉನ್ನಿಕೃಷ್ಣನ್ ಪೊಟ್ಟಿ ಆಯೋಜಿಸಿದ್ದ ಕೆಲವು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ನಟ ಜಯರಾಮ್ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೋಗಳನ್ನು ಆಧರಿಸಿ, ಎಸ್‌ಐಟಿ ಅಧಿಕಾರಿಗಳು ಜಯರಾಮ್ ಅವರನ್ನು ಪ್ರಶ್ನಿಸಿದ್ದಾರೆ. ಆ ಸಮಯದಲ್ಲಿ ಇಬ್ಬರ ನಡುವಿನ ನಿಕಟತೆ ಕೇವಲ ಆಧ್ಯಾತ್ಮಿಕ ಸಂಪರ್ಕವಾಗಿತ್ತಾ ಅಥವಾ ಬೇರೆ ಯಾವುದಾದರೂ ಕಾರಣವಿತ್ತಾ ಎಂದು ತಿಳಿಯಲು ತನಿಖೆ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಗರಣಕ್ಕೆ ಸಂಬಂಧಿಸಿದಂತೆ ನಟ ಜಯರಾಮ್, ಆರೋಪಿಗಳೊಂದಿಗೆ ಯಾವುದಾದರೂ ಹಣಕಾಸಿನ ವಹಿವಾಟು ನಡೆಸಿದ್ದಾರೆಯೇ ಎಂಬುದರ ಮೇಲೆಯೂ ಪೊಲೀಸರು ವಿಶೇಷವಾಗಿ ಗಮನಹರಿಸಿದ್ದಾರೆ. ದೇವಾಲಯದ ಚಿನ್ನ ನಾಪತ್ತೆಯ ಹಿಂದಿನ ಜಾಲದಲ್ಲಿ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ಸದ್ಯ ಕಾದು ನೋಡಬೇಕಾಗಿದೆ. ಆದಾಗ್ಯೂ, ಉನ್ನಿಕೃಷ್ಣನ್ ಅವರೊಂದಿಗೆ ಭಕ್ತನಾಗಿ ಮಾತ್ರ ಪರಿಚಯವಿರುವುದಾಗಿ ಜಯರಾಮ್ ವಿವರಿಸಿದ್ದಾರೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು

ಬರಿಮಲೆಯಂತಹ ಅತ್ಯಂತ ಪವಿತ್ರ ದೇವಾಲಯದಲ್ಲಿ ಚಿನ್ನ ಕಾಣಿಕೆ ಹೆಸರಿನಲ್ಲಿ ನಡೆದ ಅಕ್ರಮಗಳು ಕೇರಳದಾದ್ಯಂತ ದೊಡ್ಡ ಸಂಚಲನ ಸೃಷ್ಟಿಸುತ್ತಿವೆ. ಈ ಪ್ರಕರಣದಲ್ಲಿ ಈಗಾಗಲೇ ಹಲವಾರು ಜನರನ್ನು ವಿಚಾರಣೆ ನಡೆಸಿರುವ ಅಧಿಕಾರಿಗಳು, ಜಯರಾಮ್ ನೀಡಿದ ಹೇಳಿಕೆಯನ್ನು ಇತರ ಪುರಾವೆಗಳೊಂದಿಗೆ ಹೋಲಿಸುತ್ತಿದ್ದಾರೆ.

ಈ ತನಿಖೆಯ ಸಮಯದಲ್ಲಿ ಇನ್ನಷ್ಟು ಪ್ರಮುಖ ವಿಷಯಗಳು ಬೆಳಕಿಗೆ ಬರುವ ನಿರೀಕ್ಷೆಯಿದೆ.
ಸದ್ಯ ನಟ ಜಯರಾಮ್ ಅವರು ವಿಚಾರಣೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಪ್ರಮುಖ ನಟನನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿರುವುದು ಈ ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ತನಿಖಾ ಸಂಸ್ಥೆಗಳು ಸಂಗ್ರಹಿಸಿದ ತಾಂತ್ರಿಕ ಪುರಾವೆಗಳು ಮತ್ತು ಹಣಕಾಸು ವಹಿವಾಟು ದಾಖಲೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಈ ಬೆಳವಣಿಗೆಯೊಂದಿಗೆ, ಭಕ್ತರು ಸಹ ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳು ಯಾರು ಎಂದು ತಿಳಿಯಲು ಬಯಸುತ್ತಿದ್ದಾರೆ.