
ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಜನವರಿ 23ರಂದು ಬಿಡುಗಡೆ ಆಯಿತು. ಈ ಸಿನಿಮಾಗೆ ಅನಿಲ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಝೈದ್ ಖಾನ್ ಅವರ ಜೊತೆ ರಚಿತಾ ರಾಮ್ , ಮಲೈಕಾ ವಸುಪಾಲ್, ರಂಗಾಯಣ ರಘು, ಅಚ್ಯುತ್ ಕುಮಾರ್, ಕಿಶನ್ ಬಿಳಗಲಿ ಮುಂತಾದವರು ನಟಿಸಿದ್ದಾರೆ. ಜನವರಿ 23ರಂದು ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಆಯಿತು. ಝೈದ್ ಖಾನ್ , ಮಲೈಕಾ ಅವರು ಕೆಲವು ಚಿತ್ರಮಂದಿರಗಳಿಗೆ ಭೇಟಿ ನೀಡಿದರು. ಜನವರಿ 23ಕ್ಕೆ ‘ಲ್ಯಾಂಡ್ಲಾರ್ಡ್’, ‘ಬಾರ್ಡರ್ 2’ ಮುಂತಾದ ಸಿನಿಮಾಗಳು ಬಿಡುಗಡೆ ಆಗಿದ್ದು, ಎಲ್ಲ ಚಿತ್ರಗಳ ನಡುವೆ ಪೈಪೋಟಿ ಏರ್ಪಟ್ಟಿದೆ.














