Recent Posts

Sunday, April 26, 2026
ಸುದ್ದಿ

ಆಸ್ಕರ್ ವೇದಿಕೆ ಪ್ರವೇಶಿಸಿದ ʻಕಾಂತಾರ: ಚಾಪ್ಟರ್ 1ʼ-ಕಹಳೆ ನ್ಯೂಸ್

ಆಸ್ಕರ್ ವೇದಿಕೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಸದ್ದು ಮಾಡುವ ಸಮಯದ ಹತ್ತಿರ ಬರುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಆಸ್ಕರ್ ವೇದಿಕೆ​ಗೆ ಪ್ರವೇಶಿಸಿದೆ.

ʻಮಹಾವತಾರ್‌ ನರಸಿಂಹʼ ಹಾಗೂ ʻಕಾಂತಾರ: ಅಧ್ಯಾಯ 1ʼ  ಚಿತ್ರಗಳು ಅಧಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಹಾಗೂ ಐತಿಹಾಸಿಕ ಕ್ಷಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ‘ಕಾಂತಾರ-1’ ಹಾಗೂ ‘ಮಹಾವತಾರ್‌ ನರಸಿಂಹ’ ಚಿತ್ರಗಳು ತೆರೆಕಂಡು ಜನಮನ ಗೆದ್ದಿದ್ದವು. ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದವು. ಚಿತ್ರಗಳನ್ನ ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಆನಿಮೇಟೆಡ್ ಸಿನಿಮಾ ವಿಭಾಗದಲ್ಲಿ ‘ಮಹಾವತಾರ್‌ ನರಸಿಂಹ’ ಚಿತ್ರಕ್ಕೆ ಪ್ರಶಸ್ತಿ ಗ್ಯಾರಂಟಿ ಎನ್ನಲಾಗ್ತಿದೆ. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಕಾಣಿಸಿಕೊಂಡ 5 ಭಾರತೀಯ ಚಿತ್ರಗಳಲ್ಲಿ 2 ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಸಿನಿಮಾ ಅನ್ನೋದು ಮತ್ತೊಂದು ವಿಶೇಷ.

ಇದೀಗ ‘ಕಾಂತಾರ ಚಾಪ್ಟರ್‌ – 1 ಹಾಗೂ ಮಹಾವತಾರ್‌ ನರಸಿಂಹ ಎರಡೂ ಚಿತ್ರಗಳು ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಜಾಗ ಮಾಡಿಕೊಂಡು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ನಿರ್ಮಾಣ ವಿನ್ಯಾಸ ಮತ್ತು ಅತ್ಯುತ್ತಮ ಛಾಯಾಗ್ರಹಣ ಸೇರಿದಂತೆ ಪ್ರಮುಖ ಆಸ್ಕರ್ ವಿಭಾಗಗಳಲ್ಲಿ ಪರಿಗಣನೆಗೆ ಒಳಪಟ್ಟಿರುವುದು ಸಂತಸದ ಸಂಗತಿ.

ಈವರೆಗೆ ಭಾರತದ ಕೆಲ ಡಾಕ್ಯುಮೆಂಟರಿ, ಶಾರ್ಟ್‌ ಫಿಲ್ಮ್‌ಗಳಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಫೀಚರ್ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಫಿಲ್ಮ್ ಮೇಕರ್ಸ್ ಪ್ರಯತ್ನಿಸುತ್ತಲೇ ಇದ್ದಾರೆ. ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಸಿಕ್ಕಿಲ್ಲ. ಭಾರತೀಯ ಚಿತ್ರರಂಗದ ಈ ಎರಡೂ ಸಿನಿಮಾಗಳು ಈಗ ಹಾಲಿವುಡ್ ಸಿನಿಮಾಗಳ ಜೊತೆ ಆಸ್ಕರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ.

ಈ ಮೊದಲು ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದು ದಾಖಲೆ ಬರೆದಿತ್ತು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ರೇಸ್​​ನಲ್ಲಿ ಈ ಹಾಡು ಸ್ಥಾನ ಪಡೆದುಕೊಂಡಿತ್ತು. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿ, ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ. ʻಕಾಂತಾರ ಚಾಪ್ಟರ್-1‌ʼ ಸಿನಿಮಾ ಆಸ್ಕರ್ ಅಂತಿಮ ನಾಮಿನೇಷನ್ ಪಟ್ಟಿಗೆ ಎಂಟ್ರಿ ಕೊಟ್ಟರೂ ಅದು ದೊಡ್ಡ ಸಾಧನೆ ಆಗಲಿದೆ.