Saturday, March 7, 2026
ಮುಂಬೈರಾಜ್ಯಸುದ್ದಿ

792 ಕೋಟಿರ ರೂ. ವಂಚನೆ ಪ್ರಕರಣ; ಏರ್ಪೋರ್ಟ್​ನಲ್ಲಿ ಫಾಲ್ಕನ್ ಗ್ರೂಪ್ ಎಂಡಿ ಅಮರ್​​ದೀಪ್ ಕುಮಾರ್ ಬಂಧನ -ಕಹಳೆ ನ್ಯೂಸ್

ಮುಂಬೈ: 792 ಕೋಟಿ ರೂ. ಫಾಲ್ಕನ್ ಇನ್​ವಾಯ್ಸ್​ ರಿಯಾಯಿತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಲ್ಕನ್ ಗ್ರೂಪ್ ಕಂಪನಿಯ ಎಂಡಿ ಅಮರ್​​ದೀಪ್ ಕುಮಾರ್ ಅವರನ್ನು ಮುಂಬೈ ವಿಮಾನನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಜ. 07 ರಂದು ವರದಿಯಾಗಿದೆ.

ಪ್ರಕರಣವು ಫಾಲ್ಕನ್ ಇನ್‌ವಾಯ್ಸ್ ಡಿಸ್ಕೌಂಟಿಂಗ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೆಸರ್ಸ್ ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಕ್ರಿಮಿನಲ್ ನಂಬಿಕೆ ದ್ರೋಹ, ವಂಚನೆ ಮತ್ತು ಕ್ರಿಮಿನಲ್ ಪಿತೂರಿಯನ್ನು ಒಳಗೊಂಡ ಅನಧಿಕೃತ ಠೇವಣಿ ಸಂಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ 11 ಆರೋಪಿಗಳನ್ನು ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್‌ವಾಯ್ಸ್ ರಿಯಾಯಿತಿ ಯೋಜನೆಯ ಸೋಗಿನಲ್ಲಿ ಅಲ್ಪಾವಧಿಯಲ್ಲಿ ಹೆಚ್ಚಿನ ಆದಾಯ ನೀಡುವ ಭರವಸೆಯಿಂದ 7,056 ಜನರಿಂದ 4,215 ಕೋಟಿ ರೂ. ಹಣ ಸಂಗ್ರಹಿಸಿದ್ದಾರೆ. ಬಳಿಕ ಸಾರ್ವಜನಿಕರು ಕಂಪನಿಯ ಚಟುವಟಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಂತೆ, ಕೆಲವರು ಹಣವನ್ನು ವಾಪಸ್ ಮಾಡಿದ್ದು, ಒಟ್ಟು 4,065 ಜನರ 792 ಹಣ ಬಾಕಿ ಉಳಿಸಿಕೊಂಡು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಕಂಪನಿ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಜಾಹೀರಾತು
ಜಾಹೀರಾತು

 

ವಂಚನೆ ಬೆಳಕಿಗೆ ಬಂದು ಪ್ರಕರಣ ದಾಖಲಾಗುತ್ತಿದ್ದಂತೆ ಕಂಪನಿಯ ಎಂಡಿ ಅಮರ್​ದೀಪ್ ಕುಮಾರ್ ತಮ್ಮದೇ ಪ್ರೈವೆಟ್ ಜೆಟ್​ನಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಅವರ ಬಂಧನಕ್ಕೆ ಲುಕ್​ಔಟ್ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆ ಇರಾನ್​ನಿಂದ ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಮರ್​​ದೀಪ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಸಿಐಡಿ ಹೆಚ್ಚುವರಿ ಡಿಜಿ ಚಾರುಸಿನ್ಹಾ, ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಫಾಲ್ಕನ್ ಗ್ರೂಪ್ ತನ್ನ ಸ್ವಂತ ಆಸ್ತಿಗಳನ್ನು ಖರೀದಿಸಲು ಖರ್ಚು ಮಾಡಿದೆ. ಇಲ್ಲಿಯವರೆಗೆ 12 ಪ್ಲಾಟ್‌ಗಳು, ನಾಲ್ಕು ಐಷಾರಾಮಿ ಕಾರುಗಳು, 8 ಲಕ್ಷ ರೂ. ನಗದು, 21 ತೊಲ ಚಿನ್ನದ ಆಭರಣಗಳು, 20 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು ಬ್ಯಾಂಕ್‌ಗಳಲ್ಲಿ 8 ಕೋಟಿ ರೂ. ನಗದು ಸೇರಿದಂತೆ ಒಟ್ಟು 43 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.