ಛಾಯಾಗ್ರಾಹಕರು ಎಲ್ಲರೊಂದಿಗೆ ಬೆರೆತು ತಮ್ಮ ಕಷ್ಟಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ ಉತ್ತಮ ಸೇವೆ ನೀಡುವ ಶ್ರಮ ಜೀವಿಗಳು ; ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ -ಕಹಳೆ ನ್ಯೂಸ್

ಕಾಪು : ಸಂಘಟನೆಗಳು ಒಂದು ಕುಟುಂಬ ವಾಗಿ ನಿಂತು ಸಹಕರಿಸಿದಾಗ ಮಾತ್ರ ಉದ್ದೇಶಗಳಿಗೆ ಫಲ ಬರುವುದು. ಛಾಯಾಗ್ರಾಹಕರು ಎಲ್ಲರೊಂದಿಗೆ ಬೆರೆತು ತಮ್ಮ ಕಷ್ಟಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ ಉತ್ತಮ ಸೇವೆ ನೀಡುವ ಶ್ರಮ ಜೀವಿಗಳು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯ ಪಟ್ಟರು.
ಕಾಪು ಕೆ-ವನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ 2025- 27 ಸಾಲಿನ ನೂತನ ಅಧ್ಯಕ್ಷ ಸಂತೋಷ್ ನಾಯ್ಕ ಕಾಪು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೊತ್ತಲ್ಲದ ಹೊತ್ತಿನಲ್ಲಿ ಸಂಚರಿಸಿ, ತಮ್ಮ ಆರೋಗ್ಯ ಮತ್ತು ಕುಟುಂಬವನ್ನು ಲೆಕ್ಕಿಸದೆ ಸೇವೆ ಮಾಡುವ ಕಾಪು ವಲಯದ ಎಲ್ಲಾ ಸಂಘದ ಸದಸ್ಯ ಛಾಯಾಗ್ರಾಹಕರಿಗೆ ತನ್ನ ವತಿಯಿಂದ ಜೀವವಿಮೆ ಯೋಜನೆಗೆ ತನ್ನಿಂದ ಸಂಪೂರ್ಣ ಸಹಕಾರ ಎಂದೂ ಎಂದು ಶಾಸಕ ಗುರ್ಮ ಸುರೇಶ್ ಶೆಟ್ಟಿ ಆಶ್ವಾಸನೆ ನೀಡಿದರು.
ಕಾಪು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಛಾಯಾಗ್ರಾಹರಿಗೆಜೀವವಿಮೆಯ ಅಗತ್ಯದಷ್ಟೇ ಸಂಘಟನೆಗೆ ಸ್ವಂತ ಕಟ್ಟಡವೂ ಬೇಕು. ಅದಕ್ಕೆ ಬೇಕಾದ ಜಾಗವನ್ನು ಹೊಂದಿಸಿಕೊಂಡು ಕಟ್ಟಡ ನಿರ್ಮಾಣ ಮಾಡುವುದಾದರೆ, ಪ್ರಥಮ ದೇಣಿಗೆಯಾಗಿ ನಾನು 1 ಲಕ್ಷ ರೂ. ನೀಡುತ್ತೇನೆ ಎಂದರು.
ಎಸ್‌ಕೆಪಿಎ ಕೇಂದ್ರ ಸಮಿತಿಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಅಧ್ಯಕ್ಷತೆ ವಹಿಸಿದ್ದರು.
ಅವರು, ನೂತನ ಅಧ್ಯಕ್ಷ ಸಂತೋಷ್ ನಾಯ್ಕ ಕಾಪು ಮತ್ತು ಪದಾಧಿಕಾರಿಗಳಿಗೆ ಶುಭ ಕೋರಿ, ಮುಂದಿನ ಎರಡು ವರ್ಷಗಳಲ್ಲಿ ಕಾಪು ವಲಯ ಉತ್ತಮ ಸಮಾಜ ಮುಖಿ ಕೆಲಸನ್ನು ಮಾಡುವಂತಾಗಲಿ. ಎಲ್ಲಾ ಕಾರ್ಯಕ್ರಮಗಳಿಗೂ ಜಿಲ್ಲಾ ಸಮಿತಿಯ ಬೆಂಬಲ ಇದೆ ಎಂದರು.
ಸದಸ್ಯರ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸದಸ್ಯರಿಂದ ಸಂಗೀತ ,ಸನ್ಮಾನ ಮತ್ತು ಸಹಾಯ ಹಸ್ತ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಹೋಟೆಲ್ ಉದ್ಯಮಿ ಪ್ರಭಾಕರ ಪೂಜಾರಿ ಕಾಪು, ಫೊಟೋ ಪ್ಯಾಲೆಸ್ ನ ರವಿರಾಜ್ ಕಿದಿಯೂರು, ಎಸ್ ಕೆಪಿಎ ಸಂಚಾಲಕ ಗೋಪಾಲ್ ಸುಳ್ಯ, ಎಸ್‌ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಎಸ್‌ಕೆಪಿಎ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್. ಬಂಟ್ವಾಳ, ಎಸ್ ಕೆಪಿಎ
ಪ್ರಧಾನ ಕಾರ್ಯದರ್ಶಿ ಅಜಯ್ ಈ ಮಂಗಳೂರು, ಉಪಾಧ್ಯಕ್ಷ ದತ್ತಾತ್ರೇಯ ಕಾರ್ಕಳ, ಕಾಪು ವಲಯದ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಸಚಿನ್ ಉಚ್ಚಿಲ, ಕೋಶಾಧಿಕಾರಿ ಕಿರಣ್ ಉಪಸ್ಥಿತರಿದ್ದರು.
ಕಾಪು ನಿರ್ಗಮನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.













