
ಮೈಸೂರು: ಬಿಸಿ ನೀರಿನ ಪಾತ್ರೆಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಜಯಗಿರಿ ಗ್ರಾಮದಲ್ಲಿ ನಡೆದಿದೆ.
ಮಗುವಿಗೆ ಸ್ನಾನ ಮಾಡಿಸಲು ಹೋದಾಗ ಈ ದುರಂತ ಸಂಭವಿಸಿದೆ. ಎರಡು ವರ್ಷದ ವೇದಾ ಮೃತ ಮಗು. ರಮ್ಯಾ ಹಾಗೂ ಬಸಪ್ಪ ದಂಪತಿಯ ಪುತ್ರಿ.
ತಾಯಿ ರಮ್ಯಾ ಮಗುವಿಗೆ ಸ್ನಾನ ಮಾಡಿಸಲು ಕರೆದೊಯ್ದಿದ್ದ ವೇಳೆ ನೀರು ಬಿಸಿಯಾಗಿದ್ದರಿಂದ ತಣ್ಣೀರು ತರಲು ಹೋಗಿದ್ದರು. ಮಗುವನ್ನು ಸ್ನಾನದ ಮನೆಯಲ್ಲೇ ಬಿಟ್ತು ಹೋಗಿದ್ದರು. ಈ ವೇಳೆ ಮಗು ಬಿಸಿ ನೀರಿದ್ದ ಪಾತ್ರೆಗೆ ಬಿದ್ದಿದೆ.
ತಾಯಿ ಬಂದು ನೋಡುವಷ್ಟರಲ್ಲಿ ಮಗು ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದಿತ್ತು. ತಕ್ಷಣ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














