ಕಡೇಶಿವಾಲಯ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ : ಸಕಾರಾತ್ಮಕತೆ ಮಕ್ಕಳ ಬದುಕಿನ ಧನ್ಯತೆ ಮಾನ್ಯತೆಗಳಿಗೆ ಪೂರಕ: -ರಮೇಶ ಎಂ ಬಾಯಾರು-ಕಹಳೆ ನ್ಯೂಸ್

ಕಲ್ಲಡ್ಕ : ಮಕ್ಕಳು ತಮ್ಮ ಸಕಾರಾತ್ಮಕ ಚಿಂತನೆಗಳಿಂದ ಬದುಕಿನಲ್ಲಿ ಧನ್ಯತೆ ಮತ್ತು ಮಾನ್ಯತೆಯನ್ನು ಗಳಿಸಬಹುದಾಗಿದೆ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಮಾತ್ರವೇ ಹೆಚ್ಚು ಮಹತ್ವ ನೀಡಿ, ಮಾನಸಿಕ ವಿಕಾಸದತ್ತ ಅಸಡ್ಡೆ ತೋರಿದರೆ ಅವರು ವಿದ್ಯಾವಂತರಾದರೂ ಮುಂದೆ ಸಮಾಜ ಘಾತುಕರಾಗುವ ಅಪಾಯವಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ವಿದ್ಯಾವಂತರಿಂದಾಗಿದೆ. ಮನಸ್ಸು ಕಟ್ಟುವಲ್ಲಿ ಶಿಕ್ಷಣ ಸೋಲುತ್ತಿದೆಯೆಂಬುದರ ನಿದರ್ಶನವಿದು ಜ್ಞಾನ ದಾನಕ್ಕಿಂದ ಧನ ಸಂಚಯನದ ಗುರಿ ಪ್ರಮುಖವಾದಾಗ, ಸಾಮಾಜಿಕ ಅಲ್ಲೋಲ ಕುಲ್ಲೋಲಗಾಳಾಗುತ್ತವೆ ಎಂದು ಬಂಟ್ವಾಳ ತಾಲೂಕು ಮಕ್ಕಳ ಕಲಾ ಲೋಕದ ಅಧ್ಯಕ್ಷರೂ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅದ್ಯಾಪಕರೂ ಆದ ರಮೇಶ ಎಂ ಬಾಯಾರು ಹೇಳಿದರು.
ಅವರು ಕಡೇಶಿವಾಲಯ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಎಸ್. ರಾವ್ ಅಧ್ಯಕ್ಷತೆ ವಹಿಸಿ ಉದ್ಗಾಟಿಸಿ ಶುಭಹಾರೈಸಿದರು.
ಉಪಾಧ್ಯಕ್ಷರಾದ ಸುರೇಶ್ ಕನ್ನೊಟ್ಟು, ನಿಕಟಪೂರ್ವ ಆಧ್ಯಕ್ಷರಾದ ಸುರೇಶ್ ಶೆಟ್ಟಿಗಾರ್ ಬನಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಶೀನ ನಾಯ್ಕ್ ನೆಕ್ಕಿಲಾಡಿ, ವಶಿತಾ, ಪ್ರಮೀಳಾ, ಜಯಾ ಆರ್ ದೇವಾಡಿಗ, ಗೀತಾ, ನಳಿನಾಕ್ಷಿ, ಆಂಗ್ಲ ಮಾಧ್ಯಮ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾಧವ ರೈ ಭಂಡಸಾಲೆ, ಕೋಶಾಧಿಕಾರಿಗಳಾದ ವಿದ್ಯಾಧರ ರೈ, ಕಡೇಶಿವಾಲಯ ಕೆದಿಲ ಕ್ಲಸ್ಟರ್‌ಗಳ ಸಂಪನ್ಮೂಲ ವ್ಯಕ್ತಿ ಸುಧಾಕರ ಭಟ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹರೀಶ್ ರಾವ್ ಎನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶರತ್, ನಿವೃತ್ತ ಯೋಧ ಬಿಳಿಯೂರು ಗುತ್ತು ಕುರುಂಬ್ಲಾಜೆ ಕಿಟ್ಟಣ್ಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ನೆಡ್ಲೆ ಶಿವರಾಮ ಭಟ್ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಸಿ.ಆರ್.ಪಿ ಸತೀಶ್ ರಾವ್, ಗೀತಾಲಕ್ಷ್ಮೀ ಜಿ.ಪಿ.ಟಿ, ದಿವ್ಯಾ ಜಿ. ಜಿ.ಪಿ.ಟಿ, ದೇವಕಿ ಸಹ ಶಿಕ್ಷಕಿ ಹಾಗೂ ಗೌರವ ಶಿಕ್ಷಕಿಯರಾದ ಪ್ರಜ್ಞಾ, ಅನ್ನಪೂರ್ಣ, ಅಶ್ವಿನಿ, ಸ್ವಾತಿ, ವಿದ್ಯಾ .ಪ್ರೀತಿಕಾ, ಜ್ಯೋತಿ, ಜಯಲಕ್ಷ್ಮೀ, ಪವನಶ್ರೀ ಮತ್ತು ಶಾಲಾ ಎಸ್.ಡಿ. ಎಂ. ಸಿ. ಸದಸ್ಯರು ಸಹಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಾಬು ಪೂಜಾರಿ ಕೆ. ಸ್ವಾಗತಿಸಿ,ಸಹ ಶಿಕ್ಷಕಿ ಪ್ರೇಮ ನಿರೂಪಿಸಿದರು. ಗೌರವ ಶಿಕ್ಷಕಿ ಮಮತಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ಸಹ ಶಿಕ್ಷಕ ಪಿರಾಜಿ ವಾಬಳೆ ವಂದಿಸಿದರು.
ನಂತರ ಮಕ್ಕಳ ಆಕರ್ಷಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಉತ್ತಮವಾಗಿ ಶಿಸ್ತಿನೊಂದಿಗೆ ಪ್ರದರ್ಶನಗೊಂಡವು














