Friday, March 6, 2026
ಉಡುಪಿಕಾಪುಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಕಾಪು ತಾಲೂಕು ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕೇಂದ್ರದ ಸದಸ್ಯರಿಗೆ ಉಚಿತವಾಗಿ 3 ತಿಂಗಳು ಟೈಲರಿಂಗ್ ಕ್ಲಾಸ್ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿಜಿಸ್ಟರ್ ಕಾಪು ತಾಲೂಕು ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಪಡುಬಿದ್ರಿ ವಲಯದ ಅದಮಾರು ಕಾರ್ಯಕ್ಷೇತ್ರದ ಮಾತ್ರ ವಾಣಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಉಚಿತವಾಗಿ 3 ತಿಂಗಳು ಟೈಲರಿಂಗ್ ಕ್ಲಾಸ್ ತರಬೇತಿಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷರಾಗಿರುವ ಸುಮಂಗಲಾ ಡೊಂಗ್ರಿ ಇವರು ಆಗಮಿಸಿ ಟೈಲರಿಂಗ್ ಕ್ಲಾಸ್ ಉದ್ಘಾಟನೆ ಮಾಡಿ ಹೇಮಾವತಿ ಅಮ್ಮನವರ ಒಳ್ಳೆಯ ಕಾರ್ಯಕ್ರಮ ಜ್ಞಾನವಿಕಾಸ ಕಾರ್ಯಕ್ರಮಗಳು ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಕ್ಲಾಸನ್ನು ನೀಡುತ್ತಿರುವುದು ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ಕಟ್ಟಿಕೊಳ್ಳಬೇಕೆನ್ನುವ ಉದ್ದೇಶದಿಂದ ಮಾಡಿರುವಂತದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರು ವೀಣಾ ಪಡುಬಿದ್ರಿ ವಲಯದ ಮೇಲ್ವಿಚಾರಕರಾದ ಸರಿತಾ ಟೈಲರಿಂಗ್ ಶಿಕ್ಷಕರಾಗಿರುವ ಅರುಂಧತಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸವಿತಾ ಸೇವಾ ಪ್ರತಿನಿಧಿಯಾದ ಪಾರ್ವತಿ ಟೈಲರಿಂಗ್ ಕ್ಲಾಸ್ ಪಡೆದುಕೊಳ್ಳುವ 30 ಜನ ಸದಸ್ಯರು ಹಾಜರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು