
ಮಂಜೇಶ್ವರ: ಸಮಾಜದಲ್ಲಿರುವ ದೀನ ದುಖಿ:ತರ ಸೇವೇಯೇ ಭಗವಂತನ ಸೇವೆ ಜೀವನದಲ್ಲಿ ನೊಂದು ಬೆಂದಿರುವ ಜೀವಕ್ಕೆ ಆಸರೆಯಾದರೆ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯ ಎಂದು ಸಾಮಾಜಿಕ ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪಾ ತಿಳಿಸಿದರು.
ಸಮಾಜದಲ್ಲಿ ಕಷ್ಟದಲ್ಲಿರುವ ಬಾಳಿಗೆ ಬೆಳಕಾಗುವ ಮಂಜೇಶ್ವರದ ಜೈ ಶ್ರೀರಾಮ ಸೇವಾ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು ಹೊಸಂಗಡಿಯ ಹಿಲ್‌ಸೈಡ್ ಸಭಾಂಗಣದಲ್ಲಿ ಇತ್ತೀಚೆಗೆ .ಜೈಶ್ರೀರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ತಿಂಗಳ ಮಹಾಸಭೆ ಮತ್ತು ಸಂಸ್ಥೆಯ ನೂತನ ಲಾಂಛನವನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಸಲಹೆಗಾರರಾದ ನ್ಯಾಯವಾದಿ ನವೀನ್‌ರಾಜ್ ವಹಿಸಿದ್ದರು. ಸಂಸ್ಥೆಯ ಗೌರವ ಮಾರ್ಗದರ್ಶಕರಾದ ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡ, ಸಂಜೀವ ಶೆಟ್ಟಿ ಮಾಡ, ಸಂಸ್ಥೆಯ ಸ್ಥಾಪಕ ಪ್ರದೀಪ್ ಮೊರತ್ತಣೆ,ಗೌರವ ಅಧ್ಯಕ್ಷ ನಳಿನಾಕ್ಷ ಆಚಾರ್ಯ ಉದ್ಯಾವರ, ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಗೌರವ ಸಲಹೆಗಾರರಾದ ಗಿರಿ ವೀರನಗರ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ ಅಂಗಡಿಪದವು ಸಂಸ್ಥೆಯ ಪ್ರಧಾನ ಸಂಚಾಲಕ ಸುಕೇಶ್ ಬೆಜ್ಜ, ಕಾರ್ಯಕಾರಿ ಸಮಿತಿ ಸದಸ್ಯರಾದ ತುಳಸೀದಾಸ್ ಮಂಜೇಶ್ವರ, ದೀಪಕ್ ರಾಜ್ ಉಪ್ಪಳ, ಉಪಸ್ಥಿತರಿದ್ದು ಸಂಸ್ಥೆಯ ಮುಂದಿನ ಬೆಳವಣಿಗೆ ಕಾರ್ಯಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿದರು.
ಇದೇ ಸಂಧರ್ಭದಲ್ಲಿ ಸಂಸ್ಥೆಯ ನೂತನ ಲಾಂಛನವನ್ನು ಸಂಸ್ಥೆಯ ಗೌರವ ಮಾರ್ಗದರ್ಶಕರಾದ ರಾಜ ಬೆಳ್ಚಪ್ಪಾಡ ಹಾಗೂ ಶ್ರೀಕೃಷ್ಣ ಶಿವಕೃಪಾ ಅನಾವರಣಗೊಳಿಸಿದರು. ಬಳಿಕ ನೂತನ ಲಾಂಛನದ ವಿನ್ಯಾಸವನ್ನು ಮಾಡಿದ ಚಿತ್ರಕಲಾವಿದ ಕಿರಣ್ ಆಚಾರ್ಯ ಪತ್ತಿಗೆ ಇವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬಳಿಕ ಸಂಸ್ಥೆಯ ಪಧಾಧಿಕಾರಿಗಳು ಶಾಲು ಹೊದೆಸಿ ಗೌರವಿಸಿದರು.ಮಹಾಸಭೆಯ ಸಂಸ್ಥೆಯ ನೂತನ ನಿಯಮಾವಳಿಗಳನ್ನು ಪರಿಷ್ಕರಿಸಲಾಯಿತು. ಸಂಸ್ಥೆಯ ೩ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆಯುರ್ವೇದ ವೈಧ್ಯಕೀಯ ಶಿಬಿರವನ್ನು ಪೆಬ್ರವರಿಯಲ್ಲಿ ನಡೇಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸದಸ್ಯರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.ಸಂಸ್ಥೆಯ ಗೌರವ ಸಲಹೆಗಾರರಾದ ಜಗದೀಶ್ ಪ್ರತಾಪನಗರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.ರತನ್ ಕುಮಾರ್ ಹೊಸಂಗಡಿ ವಂದಿಸಿದರು.














