
ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ನಿನ್ನೆ ನಿರಾಸೆ ಮೂಡಿಸಿತ್ತು. ಅಲ್ಲದೇ ಚಿನ್ನದ ಬೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಭಾರೀ ಇಳಿಕೆಯಾಗಿತ್ತು. ಆದ್ರೆ ಅಕ್ಟೋಬರ್ 25 ರಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಇದೀಗ ನಿಂತ ನೀರಂತೆ ಚಿನ್ನದ ಬೆಲೆ ಇಂದೂ (ಅ.26) ಮುಂದುವರೆದಿದೆ.
ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ:
ದೀಪಾವಳಿ ವೇಳೆ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿತ್ತು. ಆದ್ರೆ ಇದೀಗ ದಿಢೀರ್ ಬೆಲೆ ಏರಿಕೆಯಾಗಿದೆ. ಇಂದೂ ಚಿನ್ನದ ಬೆಲೆ ನಿನ್ನೆಯಷ್ಟೇ ಇದ್ದು, 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆ ನಿನ್ನೆಗಿಂತ ಇಂದು 12,562 ರೂ. ಆಗಿದೆ. ನಿನ್ನೆಯೂ ಚಿನ್ನದ ಬೆಲೆ ಇಷ್ಟೇ ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ 1,00,496 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಅದೇ ರೀತಿ 10 ಚಿನ್ನದ ಬೆಲೆ 1,25,620 ರೂಪಾಯಿ ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. 100 ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದ್ದು, ಇಂದು 12,56,200 ರೂ. ಆಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಬೆಲೆ ಇಂದು 11,515 ರೂ. ಆಗಿದೆ. ನಿನ್ನೆಯ ಬೆಲೆಯನ್ನೂ ಇಂದೂ ಕೂಡಾ ಕಾಯ್ದುಕೊಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 92,120 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,15,150 ರೂ. ಇದ್ದು, 100 ಗ್ರಾಂ ಚಿನ್ನದ ಬೆಲೆ ಇಂದು 11,51,500 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ ಕೂಡಾ ನಿನ್ನೆಯಷ್ಟೇ ಇದ್ದು, 1 ಗ್ರಾಂ ಬೆಲೆ ಇಂದು 9,422 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ಬೆಲೆ ಕೂಡಾ ಇಂದು 75,376 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯೂ ಇಂದು ₹94,220 ರೂ. ಆಗಿದೆ. ಅದೇ ರೀತಿ 100 ಚಿನ್ನದ ಬೆಲೆ ಇಂದು 9,42,200 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,545, 22K ರೂ. 11,500, 18K ರೂ. 9,625
ಮುಂಬೈ: 24K ರೂ. 12,562, 22K ರೂ. 11,515, 18K ರೂ. 9,422
ದೆಹಲಿ: 24K ರೂ. 12,577, 22K ರೂ. 11,530, 18K ರೂ. 9,437
ಕೋಲ್ಕತ್ತಾ: 24K ರೂ. 12,562, 22K ರೂ. 11,515, 18K ರೂ. 9,422
ಬೆಂಗಳೂರು: 24K ರೂ. 12,562, 22K ರೂ. 11,515, 18K ರೂ. 9,422
ಹೈದರಾಬಾದ್: 24K ರೂ. 12,562, 22K ರೂ. 11,515, 18K ರೂ. 9,422
ಕೇರಳ: 24K ರೂ. 12,562, 22K ರೂ. 11,515, 18K ರೂ. 9,422
ಪುಣೆ: 24K ರೂ. 12,562, 22K ರೂ. 11,515, 18K ರೂ. 9,422
ವಡೋದರಾ: 24K ರೂ. 12,567, 22K ರೂ. 11,515, 18K ರೂ. 9,427
ಅಹಮದಾಬಾದ್: 24K ರೂ. 12,567, 22K ರೂ. 11,515, 18K ರೂ. 9,427
ಸ್ಪಾಟ್ ಗೋಲ್ಡ್ ವಿವರ:
ಅಕ್ಟೋಬರ್ 25, 2025 ರಂದು ರಾಯಿಟರ್ಸ್ ವರದಿ ಪ್ರಕಾರ, ಚಿನ್ನದ ಸ್ಪಾಟ್ ಬೆಲೆ (XAU=) ಪ್ರತಿ ಔನ್ಸ್‌ಕ್ಕೆ ರೂ. 4,118.68 ತಲುಪಿದೆ. ದಿನದಲ್ಲಿ 0.2% ಇಳಿಕೆ ಹಾಗೂ ವಾರದ ಅವಧಿಯಲ್ಲಿ 3% ಇಳಿಕೆಯನ್ನು ಇದು ದಾಖಲಿಸಿದೆ. ಇದು ಮೇ ತಿಂಗಳಿನಿಂದ ನಂತರದ ಅತ್ಯಂತ ದೊಡ್ಡ ವಾರದ ಕುಸಿತ ಎಂದು ದಾಖಲಾಗಿದೆ.
ಬೆಳ್ಳಿ ಬೆಲೆ ಹೇಗಿದೆ?
ಭಾರತದಲ್ಲಿ 1 ಗ್ರಾಂ ಬೆಳ್ಳಿ ಬೆಲೆ ರೂ. ₹155 ಆಗಿದ್ದು, ನಿನ್ನೆನೂ 155 ರೂ. ಇತ್ತು. ಈ ಮೂಲಕ ದೈನಂದಿನ ಬೆಳವಣಿಗೆ ಶೂನ್ಯವಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,550, ನಿನ್ನೆಯೂ ರೂ. 1,550 ಆಗಿತ್ತು. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 15,500 ಆಗಿದೆ. ಇನ್ನು 1 ಕಿಲೋಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,55,000 ಆಗಿದೆ.
ಚಿನ್ನ, ಬೆಳ್ಳಿ ಬೆಲೆ ಇತ್ತೀಚೆಗೆ ಏರಿಳಿತವಾಗುತ್ತಲೇ ಇದೆ. ಚಿನ್ನದ ಬೆಲೆ ಇಂದು ನಿನ್ನೆಯ ಸ್ಥಿತಿಯಲ್ಲೇ ಇದ್ದು, ಬೆಳ್ಳಿ ಬೆಲೆಯೂ ಸ್ಥಿರವಾಗಿದೆ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರು ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡು ಖರೀದಿಸಿದರೆ ಉತ್ತಮ.













