Sunday, March 8, 2026
ಸುದ್ದಿ

ಆರ್.ಎಸ್.ಎಸ್ ಸೇವಾ ಭಾರತ ಸಂಸ್ಥೆಗೆ ಸಾವಿರಾರು ಕೋಟಿ ರೂಪಾಯಿ ದಾನ ಮಾಡಿದ ಸಮಾಜವಾದಿ ಮಾಜಿ ನಾಯಕ ಅಮರ್ ಸಿಂಗ್ – ಕಹಳೆ ನ್ಯೂಸ್

ಲಖನೌ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ತನ್ನ ಕೋಟ್ಯಂತರ ರೂ.ಮೌಲ್ಯದ ಪಿತ್ರಾರ್ಜಿತ  ಆಸ್ತಿಯನ್ನು ಅಜಂಗಢದ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರಿದ ಸೇವಾ ಭಾರತ ಸಂಸ್ಥೆಗೆ ದಾನ ಮಾಡಿದ್ದಾರೆ.

ಎಸ್ಪಿ ಪಕ್ಷದ ಮಾಜಿ ಕರ‍್ಯರ‍್ಶಿ ಅಮರ್ ಸಿಂಗ್ ಅಜಂಗಢದ ರ‍್ವಾನ್ ಬಳಿಯಲ್ಲಿನ 10 ಕೋಟಿ. ರೂ. ಮೌಲ್ಯದ ಭೂಮಿ, 4 ಕೋಟಿ ಮೌಲ್ಯದ ಪರ‍್ವಜರ ಕಾಲದ ಮನೆ ಸೇರಿದಂತೆ 15 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಸೇವಾ ಭಾರತಿ ಸಂಸ್ಥೆಗೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ ಎಸ್ ಎಸ್ ಮೂಲಕ ಬಿಜೆಪಿಗೆ ಸೇರಿಕೊಳ್ಳಲು ಅಮರ್ ಸಿಂಗ್ ದಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದಿರುವ ಅಮರ್ ಸಿಂಗ್ , ಸಮಾಜ ಸೇವೆ ಹಾಗೂ ತಮ್ಮ ಪರ‍್ವಜರ ನೆನಪಿನಲ್ಲಿ ಆಸ್ತಿ ದಾನ ಮಾಡಿರುವುದಾಗಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು

ಅಜಂಗಡದ ಅಮರ್ ಸಿಂಗ್, ಮುಲಾಯಂ ಸಿಂಗ್ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೨೦೧೦ರಲ್ಲಿ ಎಸ್ಪಿಯಿಂದ ಹೊರಬಂದು ಅಮರ್ ಸಿಂಗ್ ರಾಷ್ಟ್ರೀಯ ಲೋಕ ಮಂಚ್ ಎಂಬ ಹೆಸರಿನಲ್ಲಿ ಪರ‍್ವಾಂಚಲಕ್ಕಾಗಿ ಒತ್ತಾಯಿಸಿದರು.

2012 ರ ಉತ್ತರ ಪ್ರದೇಶ ಚುನಾಣೆಯಲ್ಲಿ ತಮ್ಮ ಪಕ್ಷದಿಂದ 360 ಅಭ್ರ‍್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ. ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದ್ದರು. ಅಜಂಗಢದಲ್ಲಿ ಗೆಲ್ಲುವಲ್ಲಿ ವಿಫಲರಾದ ಬಳಿ ರಾಜಕೀಯದಿಂದ ಹೊರಬಂದಿದ್ದರು.

2016 ರಲ್ಲಿ ಎಸ್ಪಿಗೆ ಮರು ಸರ‍್ಪಡೆಯಾದರೂ ಅಖಿಲೇಶ್ ಯಾದವ್ ಅವರಿಂದ ಮತ್ತೆ ವಜಾಗೊಂಡಿದ್ದರು. ೨೦೧೭ ಜನವರಿಯಲ್ಲಿ ತಮ್ಮ ತಂದೆಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಅಖಿಲೇಶ್ ಯಾದವ್ ವಜಾಗೊಳಿಸಿದ್ದರು.
ಆರ್ ಎಸ್ ಎಸ್ ಗೆ ಅಮರ್ ಸಿಂಗ್ ದಾನ ನೀಡಿರುವ ಬಗ್ಗೆ ತಮ್ಮಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಅವರ ಸಹೋದರ ಅರವಿಂದ್ ಸಿಂಗ್ ತಿಳಿಸಿದ್ದಾರೆ.