Saturday, March 7, 2026
ಕ್ರೀಡೆಜಿಲ್ಲೆದಕ್ಷಿಣ ಕನ್ನಡಮಾಹಿತಿಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಪ್ರಾಂತ ಮಟ್ಟಕ್ಕೆ ಆಯ್ಕೆ -ಕಹಳೆ ನ್ಯೂಸ್

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಶ್ರೀರಾಮ ಶಾಲೆ ಕಲ್ಲಡ್ಕ ಇಲ್ಲಿ ಸೆಪ್ಟೆಂಬರ್ 5 ರಂದು ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಸರಸ್ವತೀ  ವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪಂದ್ಯಾಟದಲ್ಲಿ ಚೈತ್ರೇಶ್ 8ನೇ ತರಗತಿ ಬೆಸ್ಟ್ ಆಲ್ ರೌಂಡರ್ ಆಗಿ, ಹೇಮಂತ್ ಎಂ.ಎ 8ನೇ ತರಗತಿ ಉತ್ತಮ ಹಿಡಿತಗಾರರಾಗಿ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ 7ನೇ ತರಗತಿಯ ನಿಶ್ಮಿತ್ ಪುರಿಯ, ಪವಿತ್,
ಸೃಜನ್, ಗಗನ್ ಜೆ.ಕೆ, ಪೂರ್ಣೇಶ್ ಹಾಗೂ 8ನೇ ತರಗತಿಯ ಎನ್.ಕೆ ಯಶ್ವಿತ್, ಆದಿತ್ಯ ಎ.ಎಸ್, ಲಿಖಿತ್ ಕುಂಬಾರ, ಲೀಕ್ಷಿತ್ ಹಾಗೂ ಮೋಕ್ಷಿತ್ ಭಾಗವಹಿಸಿದ್ದರು. ಇವರಿಗೆ ನಮ್ಮ ಸಂಸ್ಥೆಯ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಶ್ರೀ ಶಿವಪ್ರಸಾದ್, ಶ್ರೀ ನಾಗೇಶ್ ಹಾಗೂ ಪ್ರೌಢ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲಕ್ಷ್ಮೀಶ ಗೌಡ ಆರಿಗ ತರಬೇತಿಯನ್ನು ನೀಡಿರುತ್ತಾರೆ. ಆಟಗಾರರಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಸಂಸ್ಥೆಯ ಪರವಾಗಿ ತುಂಬು  ಹೃದಯದ ಅಭಿನಂದನೆಗಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು