Saturday, March 7, 2026
ಜಿಲ್ಲೆದಕ್ಷಿಣ ಕನ್ನಡಮಾಹಿತಿಶಿಕ್ಷಣಸುದ್ದಿಹೆಚ್ಚಿನ ಸುದ್ದಿ

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಭವಿಷ್ ಘಟಕದ ವತಿಯಿಂದ ದಿನಾಂಕ  ಸೆಪ್ಟೆಂಬರ್ 5  ರಂದು ಶಿಕ್ಷಕರ ದಿನಾಚರಣೆ ಹಾಗೂ 2025-26ನೇ ಸಾಲಿನ ಭವಿಷ್ ಘಟಕದ ಚಟುವಟಿಕೆಗಳ ಉದ್ಘಾಟನೆ –ಕಹಳೆ ನ್ಯೂಸ್

ಕಾರ್ಯಕ್ರಮದ ಪ್ರಾರಂಭದಲ್ಲಿ ಗಣ್ಯರಿಂದ ದೀಪ ಪ್ರಜ್ವಲನ ನಂತರ ಡಾ| ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರ ಮೂಲಕ ಭವಿಷ್ ಘಟಕದ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದವನ್ನು ಪಡೆದ ಭಾವನಾತ್ಮಕ ಸಂದರ್ಭಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಭವಿಷ್ ಘಟಕದ ನೂತನ ವಿದ್ಯಾರ್ಥಿಗಳು ಹಿರಿಯರಿಂದ ತಾಂಬೂಲ ಪಡೆದು ಆಶೀರ್ವಾದ ಪಡೆದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಭವಿಷ್ಯಕ್ಕೆ ದಾರಿ ತೋರಿಸುವವರೇ ಗುರು, ಜೀವನದಲ್ಲಿ ಶಿಕ್ಷಕರಾಗುವುದಕ್ಕಿಂತ ಮಿಗಿಲಾದ ಸಂಗತಿಯಿಲ್ಲ, ಇದು ಬಹಳ ಶ್ರೇಷ್ಠವಾದ ವೃತ್ತಿ ಎಂದರು. ಭವಿಷ್ ಘಟಕದ ಪ್ರಾಂತ ಸಂಯೋಜಕರಾದ ಶ್ರೀ ಗಣಪತಿ ಹೆಗ್ಡೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಭವಿಷ್ ಘಟಕವನ್ನು ಉದ್ಘಾಟಿಸಿ, ಇದರ ಮಹತ್ವವನ್ನು ತಿಳಿಸುತ್ತಾ ಗುರು-ಶಿಷ್ಯ ಸಂಬಂಧವು ತಾಯಿ- ಮಗುವಿನ ಸಂಬಂಧದಂತಿರಬೇಕು ಎಂದರು. ಪುತ್ತೂರು  ನರೇಂದ್ರ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಹಾಗೂ ಯಕ್ಷಗಾನ ಕಲಾವಿದೆ ಶ್ರೀಮತಿ ಮಧುರಾ ಗಣರಾಜ್ ಭಟ್  ಅತಿಥಿಗಳಾಗಿ ಆಗಮಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭವಿಷ್ ಘಟಕದ ನಿರ್ದೇಶಕಿ  ಶ್ರೀಮತಿ ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ದಿವ್ಯಲಕ್ಷ್ಮೀ ಸ್ವಾಗತಿಸಿ, ಅಕ್ಷಯ ನರಸಿಂಹ ವಂದಿಸಿ,         ಕು. ಧನುಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು