Friday, March 6, 2026
ಕಡಬಜಿಲ್ಲೆದಕ್ಷಿಣ ಕನ್ನಡಪ್ರಾದೇಶಿಕಶಿಕ್ಷಣಸುದ್ದಿ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಯೋಗಾಸನ ಸ್ಪರ್ಧೆಯಲ್ಲಿ ಪ್ರಾಂತ ಮಟ್ಟಕ್ಕೆ ಆಯ್ಕೆ -ಕಹಳೆ ನ್ಯೂಸ್

ಕಡಬ : ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಡಲಕೆರೆ ಮೂಡಬಿದ್ರೆ ಇಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 14ರ ವಯೋಮಾನದ ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ 8ನೇ ತರಗತಿಯ ಲಿಖಿತ ಪ್ರಥಮ ಸ್ಥಾನ, 14ರ ವಯೋಮಾನದ ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ ಪೂಜನ್ ಡಿ.ಆರ್ 8ನೇ ತರಗತಿ ಪ್ರಥಮ ಸ್ಥಾನ, 17ರ ವಯೋಮಾನದ ಬಾಲಕರ ರಿದಮಿಕ್ಸ್ ಸ್ಪರ್ಧೆಯಲ್ಲಿ 9ನೇ ತರಗತಿಯ ದಿಗಂತ್ ಪ್ರಥಮ ಸ್ಥಾನ, ಅಥ್ಲೆಟಿಕ್ಸ್ ವಿಭಾಗದಲ್ಲಿ ಜಿತೇಶ್.ಕೆ 10ನೇ ತರಗತಿ ಪ್ರಥಮ ಸ್ಥಾನ, 17ರ ವಯೋಮಾನದ ಬಾಲಕಿಯರ ಸಾಂಪ್ರದಾಯಿಕ ಗುಂಪು ಯೋಗ ಸ್ಪರ್ಧೆಯಲ್ಲಿ ಇಂಚರ ಪಂಚಮ ಸ್ಥಾನವನ್ನು ಪಡೆದು ಮುಂದೆ ಬೆಳಗಾಂನಲ್ಲಿ ನಡೆಯುವ ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಬಾಲಕಿಯರ ಅಥ್ಲೆಟಿಕ್ ವಿಭಾಗದಲ್ಲಿ ರಕ್ಷಾ ಎಂ.ಜೆ 10ನೇ ತರಗತಿ ದ್ವಿತೀಯ ಸ್ಥಾನ ಹಾಗೂ ರಿದಮಿಕ್ ವಿಭಾಗದಲ್ಲಿ ಜ್ಞಾನವಿ ಎನ್ 9ನೇ ತರಗತಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಕಿಶೋರವರ್ಗದ ಬಾಲಕರ ಹಾಗೂ ಬಾಲಕಿಯರ ವಿಭಾಗದ ಸಮಗ್ರ ಬಹುಮಾನವನ್ನು ವಿದ್ಯಾರ್ಥಿಗಳು ಪಡೆದಿರುತ್ತಾರೆ. ಇವರಿಗೆ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ.ಬಿ.ವಿ. ಇವರು ತರಬೇತಿ ನೀಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು