
ಚಿನ್ನದ ಬೆಲೆ ಹಾವಳಿ ಜೋರಾಗಿದೆ. ಬಿರುಗಾಳಿಯಂತೆ ಏರುತ್ತಿದೆ ಬಂಗಾರದ ಬೆಲೆ. ಜುಲೈ ತಿಂಗಳಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಏರಿಕೆಯ ಹಾದಿಯಲ್ಲೇ ಸಾಗಿದ ಬಂಗಾರ ಇಂದು ಕೈ ಸುಡುತ್ತಿದೆ. 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 10,12,900 ರೂ.
ಗೆ ಬಂದು ನಿಂತಿದೆ. ಅಂದರೆ ಇಂದು ಒಂದೇ ದಿನದಲ್ಲಿ 11,400 ರೂ. ಏರಿಕೆಯಾಗಿದೆ. ಈ ಪರಿಯ ಬೆಲೆ ಏರಿಕೆಯು ಜನರ ನೆತ್ತಿ ಸುಡುತ್ತದೆ. ಹಬ್ಬ, ಮದುವೆಯಂತಹ ಸಮಾರಂಭಗಳು ಮಾಡುವ ಸಮಯದಲ್ಲಿ, ಖರೀದಿದಾರರ ಜೇಬಿಗೆ ಕೆಂಡ ತುಂಬಿದಂತಾಗಿದೆ. ಹಾಗಾದ್ರೆ ಇಂದು ಯಾವ್ಯಾವ ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ತಿಳಿಯಿರಿ.
ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಇಂದು ಭಾರತದ ಚಿನ್ನದ ಬೆಲೆಯಲ್ಲಿ ಮಹತ್ವದ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂ ರೂ.10,129 ಕ್ಕೆ ಏರಿಕೆಯಾಗಿ ನಿನ್ನೆರೂ.10,015 ಆಗಿದ್ದ ದರಕ್ಕಿಂತ ರೂ.114 ಹೆಚ್ಚಾಗಿದೆ. ಇದೇ 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ದರ ರೂ.1,01,290 ಆಗಿದ್ದು, ನಿನ್ನೆಗೂ ಲಭ್ಯವಿದ್ದ ರೂ.1,00,150ಕ್ಕಿಂತ ರೂ.1,140 ಅಧಿಕವಾಗಿದೆ.
22 ಕ್ಯಾರೆಟ್ ಚಿನ್ನಕ್ಕೆಷ್ಟು?
ಇದಕ್ಕೆ ಸಮಾನವಾಗಿ, 22 ಕ್ಯಾರೆಟ್ ಚಿನ್ನದ ದರವೂ ಹೆಚ್ಚಾಗಿದ್ದು, ಪ್ರತಿ ಗ್ರಾಂಗೆ ಇಂದು ರೂ.9,285 ಆಗಿದೆ, ನಿನ್ನೆ ಈ ದರ ರೂ.9,180 ಆಗಿತ್ತು. ಅಂದರೆ ಪ್ರತಿ ಗ್ರಾಂಗೆ ರೂ.105 ಏರಿಕೆ ಆಗಿದೆ. 10 ಗ್ರಾಂಗೆ ಈ ದರ ಇಂದು ರೂ.92,850 ಆಗಿದ್ದು, ನಿನ್ನೆದಿನದ ರೂ.91,800 ಕಿಂತ ರೂ.1,050 ಹೆಚ್ಚಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಏರಿಕೆ?
ಇದೇ ರೀತಿ 18 ಕ್ಯಾರೆಟ್ ಚಿನ್ನದ ದರದಲ್ಲಿ ಕೂಡ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಂಗೆ ಇಂದು ರೂ.7,597 ಆಗಿದೆ, ನಿನ್ನೆ ಈ ದರ ರೂ.7,511 ಆಗಿತ್ತು. ಇದು ಪ್ರತಿ ಗ್ರಾಂಗೆ ರೂ.86 ಹೆಚ್ಚಾಗಿದೆ. 10 ಗ್ರಾಂಗೆ ಈ ದರ ಇಂದು ರೂ.75,970 ಆಗಿದ್ದು, ನಿನ್ನೆದಿನದ ರೂ.75,110 ಕಿಂತ ರೂ.860 ಹೆಚ್ಚಾಗಿದೆ.
ಭಾರತದಲ್ಲಿ ನಗರವಾರು ಚಿನ್ನದ ದರದ ವಿವರಣೆ (1 ಗ್ರಾಂಗೆ):
ಚೆನ್ನೈ: 24K – 10,129 ರೂ., 22K – 9,285 ರೂ., 18K – 7,650 ರೂ.
ಮುಂಬೈ: 24K – 10,129 ರೂ., 22K – 9,285 ರೂ., 18K – 7,597 ರೂ.
ದೆಹಲಿ: 24K – 10,144 ರೂ., 22K – 9,300 ರೂ., 18K – 7,609 ರೂ.
ಕೋಲ್ಕತ್ತಾ: 24K – 10,129 ರೂ., 22K – 9,285 ರೂ., 18K – 7,597 ರೂ.
ಬೆಂಗಳೂರು: 24K – 10,129 ರೂ., 22K – 9,285 ರೂ., 18K – 7,597 ರೂ.
ಹೈದರಾಬಾದ್: 24K – 10,129 ರೂ., 22K – 9,285 ರೂ., 18K – 7,597 ರೂ.
ಕೇರಳ: 24K – 10,129 ರೂ., 22K – 9,285 ರೂ., 18K – 7,597 ರೂ.
ಪುಣೆ: 24K – 10,129 ರೂ., 22K – 9,285 ರೂ., 18K – 7,597 ರೂ.
ವಡೋದರಾ: 24K – 10,134 ರೂ., 22K – 9,290 ರೂ., 18K – 7,601 ರೂ.
ಅಹಮದಾಬಾದ್: 24K – 10,134 ರೂ., 22K – 9,290 ರೂ., 18K – 7,601 ರೂ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇಂದು ಬೆಳ್ಳಿ ಬೆಲೆಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 1 ಗ್ರಾಂ ಬೆಳ್ಳಿಗೆ ದರ 118 ರೂ. ಆಗಿದ್ದು, ಇದು ಹಿಂದಿನ 116 ರೂ.ದಿಂದ 2 ರೂ. ಹೆಚ್ಚಾಗಿದೆ. 10 ಗ್ರಾಂ ಬೆಳ್ಳಿ 1,180 ರೂ.ಗೆ ತಲುಪಿದ್ದು, ಇದು 1,160 ರೂ.ಕ್ಕಿಂತ 20 ರೂ. ಹೆಚ್ಚಾಗಿದೆ. 100 ಗ್ರಾಂ ಬೆಳ್ಳಿಗೆ ದರ 11,800 ರೂ. ಆಗಿದ್ದು, ಹಳೆಯ ದರದ ಮೇಲೆ 200 ರೂ. ಏರಿಕೆಯಾಗಿದೆ. 1000 ಗ್ರಾಂ (1 ಕಿಲೋ) ಬೆಳ್ಳಿಗೆ ದರ 1,18,000 ರೂ. ಆಗಿದ್ದು, ಇದು ಹಿಂದಿನ 1,16,000 ರೂ.ದೊಂದಿಗೆ ಹೋಲಿಸಿದರೆ 2,000 ರೂ. ಹೆಚ್ಚಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಜುಲೈ 22ರಂದು ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್‌ಗೆ $3,390.69 ಆಗಿತ್ತು. ಹಾಗೆಯೇ ಇಂದು ಅಮೆರಿಕದ ಫ್ಯೂಚರ್ ಗೋಲ್ಡ್ ದರ, ಪ್ರತಿ ಔನ್ಸ್‌ಗೆ $3,405.20 ದರಕ್ಕೆ ವಹಿವಾಟು ನಡೆಸುತ್ತಿದೆ.
ಚಿನ್ನದ ಬೆಲೆ ಎಗ್ಗಿಲ್ಲದೇ ಏರಿಕೆಯಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಆರ್ಥಿಕ ಅಸ್ಥಿರತೆ, ಡಾಲರ್ ಬಲಹೀನತೆ ಮತ್ತು ಬಡ್ಡಿದರ ಕಡಿತದ ನಿರೀಕ್ಷೆಗಳಿಂದ ಚಿನ್ನದ ಬಂಡವಾಳದ ಮೇಲೆ ಹೂಡಿಕೆದಾರರ ನಂಬಿಕೆ ಹೆಚ್ಚಳವಾಗಿದೆ. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಮೌಸಮ್ ಮತ್ತು ಹಬ್ಬಗಳ ಕಾಲ ಆರಂಭವಾಗುತ್ತಿರುವುದರಿಂದ ದೇಶೀಯ ಬೇಡಿಕೆಯೂ ಉತ್ಕಟಗೊಂಡಿದ್ದು, ಚಿನ್ನದ ದರದ ಮೇಲಿನ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಜುಲೈ ತಿಂಗಳಲ್ಲಿ ದಿನಕಳೆದಂತೆ ಚಿನ್ನದ ದರ ಕ್ರಮವಾಗಿ ಮೇಲಕ್ಕೆ ಹೋಗುತ್ತಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಿಗೆ ಇದು ಗಮನಾರ್ಹ ಬೆಳವಣಿಗೆವಾಗಿದೆ.














