
ಮನೆಯ ಹತ್ತಿರ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಸಾವನಪ್ಪಿದ ಘಟನೆ ಸೋಮವಾರ (ಜು.14 ) ನಡೆದಿದೆ.
114 ವಯಸ್ಸಿನ ಫೌಜಾ ಸಿಂಗ್, ಪಂಜಾಬ್‌ನ ಜಲಂದರ್ ಜಿಲ್ಲೆಯ ಬಿಯಾಸ್ ಗ್ರಾಮದ ಮನೆಯ ಹತ್ತಿರ ವಾಕಿಂಗ್ ಮಾಡುವಾಗ, ವಾಹನವೊಂದು ಡಿಕ್ಕಿ ಹೊಡೆದಿದೆ.
ತಲೆಗೆ ತೀವೃವಾದ ಪೆಟ್ಟು ಬಿದ್ದ ಪರಿಣಾಮ ಸೋಮವಾರ ಸಂಜೆ ಅವರು ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಫೌಜಾ ಸಿಂಗ್ ಅವರ ದೇಹವನ್ನು ವಿದೇಶದಲ್ಲಿ ವಾಸಿಸುತ್ತಿರುವ ಅವರ ಮಕ್ಕಳು ಬರುವವರೆಗೂ ಶವಾಗಾರದಲ್ಲಿ ಇರಿಸಲಾಗಿದೆ. ಅವರು ಬಂದ ನಂತರವೇ ಅವರ ಅಂತ್ಯಕ್ರಿಯೆ ನಡೆಯಲಿದೆ.
ಟರ್ಬನ್ಡ್ ಟೊರ್ನಾಡೊ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಫೌಜಾ ಸಿಂಗ್ ಈ ವರ್ಷ ಏಪ್ರಿಲ್ 1 ರಂದು 114 ನೇ ವರ್ಷಕ್ಕೆ ಕಾಲಿಟ್ಟರು ಮತ್ತು 14 ವರ್ಷಗಳ (2000 ರಿಂದ 2013) ತಮ್ಮ ವೃತ್ತಿಜೀವನದಲ್ಲಿ ಒಟ್ಟು ಒಂಬತ್ತು ಪೂರ್ಣ ಮ್ಯಾರಥಾನ್‌ಗಳನ್ನು ಓಡಿದ್ದರು.
ಪ್ರಧಾನಿ ಮೋದಿ ಸಂತಾಪ
ಫೌಜಾ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ X ನಲ್ಲಿ ಸಂತಾಪ ಸೂಚಿಸಿದ್ದಾರೆ.














