Saturday, April 25, 2026
ಕ್ರೀಡೆಸುದ್ದಿ

ಸುಲಭದ ಎದುರಾಳಿ ಎಂದು ಹೀಯಾಳಿಸಿದ್ದ ಕಾರ್ಲ್ಸನ್‌ ಗೆ ಸೋಲಿನ ರುಚಿ ತೋರಿಸಿದ ಗುಕೇಶ್ -ಕಹಳೆ ನ್ಯೂಸ್

ಗ್ರೆಬ್:‌ ಭಾರತದ ಯುವ ಚೆಸ್‌ ಪ್ರತಿಭೆ ಡಿ.ಗುಕೇಶ್‌ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಗುರುವಾರ ನಡೆದ ಗ್ರ್ಯಾಂಡ್ ಚೆಸ್ ಟೂರ್‌ನ ಭಾಗವಾಗಿರುವ ಸೂಪರ್‌ಯುನೈಟೆಡ್ ರಾಪಿಡ್ ಮತ್ತು ಬ್ಲಿಟ್ಜ್ ಕ್ರೊಯೇಷಿಯಾದ ಆರನೇ ಸುತ್ತಿನಲ್ಲಿ 18 ವರ್ಷದ ಆಟಗಾರ ಗುಕೇಶ್‌ ಅವರು ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್‌ ಕಾರ್ಲ್ಸನ್‌ ಅವರನ್ನು ಸೋಲಿಸಿದರು.

ಗುಕೇಶ್ ಅವರನ್ನು “ದುರ್ಬಲ ಆಟಗಾರರಲ್ಲಿ ಒಬ್ಬರು” ಎಂದು ಮ್ಯಾಗ್ನಸ್ ಕಾರ್ಲ್ಸನ್ ಹಣೆಪಟ್ಟಿ ಕಟ್ಟಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ವಿಶ್ವದ ನಂ.1 ಆಟಗಾರನಿಗೆ ಭಾರತದ ಡಿ. ಗುಕೇಶ್ ಚದುರಂದಾಟದಲ್ಲಿ ಅದ್ಭುತ ಉತ್ತರ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೊಮ್ಮೆ, ಕಾರ್ಲ್ಸನ್ ಹಾಲಿ ವಿಶ್ವ ಚಾಂಪಿಯನ್ ವಿರುದ್ಧ ಪಂದ್ಯ ಬಿಟ್ಟು ಹೋಗಬೇಕಾಯಿತು. ಕಳೆದ ತಿಂಗಳು ನಾರ್ವೆ ಚೆಸ್‌ನಲ್ಲಿ ನಡೆದ ಅವರ ಹಿಂದಿನ ಪಂದ್ಯದಲ್ಲಿ ಗುಕೇಶ್‌ ಜಯ ಸಾಧಿಸಿದ್ದರು. ಈ ಬಾರಿ ಜಾಗ್ರೆಬ್‌ನಲ್ಲಿ ನಡೆದ ಕೂಟದಲ್ಲಿ ಕಾರ್ಲ್ಸನ್ ವೇಗದ ಆಟವಾಡಿದ್ದರು. ಆದರೆ ಶಾಂತವಾಗಿದ್ದ ಗುಕೇಶ್, ಮತ್ತೊಮ್ಮೆ ನಾರ್ವೇ ಆಟಗಾರನನ್ನು ಸೋಲಿಸಿದರು.

ವಾರದ ಆರಂಭದಲ್ಲಿ, ಕ್ರೊಯೇಷಿಯಾದ ಕೂಟದ ಬಗ್ಗೆ ಚರ್ಚಿಸುವಾಗ ಕಾರ್ಲ್ಸನ್ ಅವರು ಗುಕೇಶ್‌ ಬಗ್ಗೆ ಹೇಳಿಕೆ ನೀಡಿದ್ದರು. ಗುಕೇಶ್ ಅವರನ್ನು “ದುರ್ಬಲ ಆಟಗಾರರಲ್ಲಿ ಒಬ್ಬರು” ಎಂದು ಉಲ್ಲೇಖಿಸಿದ್ದರು. ಈಗ ಅದುವೇ ಅವರಿಗೆ ಮುಳುವಾಗಿದೆ.

“ಈಗ ನಾವು ಮ್ಯಾಗ್ನಸ್ ಪ್ರಾಬಲ್ಯವನ್ನು ಪ್ರಶ್ನಿಸಬಹುದು. ಇದು ಕೇವಲ ಮತ್ತೊಂದು ಸೋಲಲ್ಲ. ಇದು ಮನವರಿಕೆಯಾಗುವ ಸೋಲು. ಗುಕೇಶ್ ಕೇವಲ ತಪ್ಪುಗಳನ್ನು ಲಾಭ ಮಾಡಿಕೊಳ್ಳಲಿಲ್ಲ – ಅವರು ಉತ್ತಮವಾಗಿ ಆಡಿದರು” ಎಂದು ವೀಕ್ಷಕ ವಿವರಣೆಗಾರ ಗ್ಯಾರಿ ಕಾಸ್ಪರೋವ್ ಹೇಳಿದರು.