Sunday, March 8, 2026
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬೆಂಗಳೂರುಸುದ್ದಿ

ಖ್ಯಾತ ಗಾಯಕಿಯೊಬ್ಬರ ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ನ್ಯಾಯಾಲಯದಿಂದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿತ ವರದಿ, ವಿಡಿಯೋ, ಫೋಟೋಗಳ ತೆರೆವಿಗೆ ಖಡಕ್ ಸೂಚನೆ ಹಾಗೂ ಬಿತ್ತರಿಸದಂತೆ ತಡೆಯಾಜ್ಞೆ- ಕಹಳೆ ನ್ಯೂಸ್

ಪುತ್ತೂರು : ಮಾಧ್ಯಮಗಳಲ್ಲಿ ಬಿತ್ತರಿತವಾಗುತ್ತಿದ್ದ ವರದಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಫೋಸ್ಟ್ ಗಳ‌ ಕುರಿತು ಪುತ್ತೂರು ನ್ಯಾಯಾಲಯದಲ್ಲಿ ಖ್ಯಾತ ಗಾಯಕಿಯೊಬ್ಬರ ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ನ್ಯಾಯವಾದಿ ಮಹೇಶ್ ಕಜೆಯವರ ಮೂಲಕ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ತಡೆಯಾಜ್ಞೆ ನೀಡಿ ಆದೇಶ ಮಾಡಿದ್ದಾರೆ. 
ಈ ಪ್ರಕರಣದಲ್ಲಿ ವಿಚ್ಛೇದನ ಪ್ರಕ್ರಿಯೆಯ ವಿಷಯವನ್ನು ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳು ನ್ಯಾಯಾಲಯದ ಅನುಮತಿಯಿಲ್ಲದೆ ಪ್ರಕಟಿಸಿವೆ ಮತ್ತು ಅರ್ಜಿದಾರರ ಗೌಪ್ಯತೆಯನ್ನು ಉಲ್ಲಂಘಿಸಿವೆ ಎಂದು ಅಭಿಪ್ರಾಯ ಪಟ್ಟಿದೆ. ಅರ್ಜಿದಾರರ ಖಾಸಗಿ ಜೀವನದ ಅತ್ಯಂತ ವೈಯಕ್ತಿಕ ಮತ್ತು ಸೂಕ್ಷ್ಮ ವಿಷಯಗಳಾಗಿವೆ ಎಂದು ಹೇಳಿದೆ. ಆದಾಗ್ಯೂ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಈಗಾಗಲೇ ಊಹಾತ್ಮಕ ಮಾನನಷ್ಟಕರ ಸಂವೇದನಾಶೀಲ ಸುದ್ದಿಗಳು ಅಥವಾ ಅರ್ಜಿದಾರರ ಗೌಪ್ಯತೆಯನ್ನು ಉಲ್ಲಂಘಿಸುವ ವರದಿಗಳನ್ನು ಪ್ರಕಟಿಸಿವೆ. ಅಂತಹ ಪ್ರಕಟಣೆಯು ಅರ್ಜಿದಾರರ ಖ್ಯಾತಿ ಮತ್ತು ಭಾವನೆಗಳಿಗೆ ಹಾನಿಯನ್ನುಂಟುಮಾಡುತ್ತಿದೆ.

 (ಎಲೆಕ್ಟ್ರಾನಿಕ್, ಮುದ್ರಣ, ಸಾಮಾಜಿಕ, ವೆಬ್ ಮಾಧ್ಯಮ) ಈ ವಿಚ್ಛೇದನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ, ವಿಡಿಯೋ, ಆಡಿಯೋ, ರೀಲ್‌ಗಳು, ವರದಿ, ಲೇಖನ, ಕಮೆಂಟ್‌ಗಳು ಅಥವಾ ಯಾವುದೇ ರೀತಿಯ ಪ್ರಕಟಣೆಯನ್ನು ಪ್ರಕಟಿಸುವಂತಿಲ್ಲ ಮತ್ತು ಎಲ್ಲಾ ಮಾಧ್ಯಮಗಳು ಈಗಾಗಲೇ ಪ್ರಕಟಿಸಿರುವ ಸುದ್ದಿಗಳನ್ನು ತಮ್ಮ ವೆಬ್‌ಸೈಟ್‌ನಿಂದ ಅಳಿಸಲು ಹಾಗೂ ಇತರ ಸುದ್ದಿ, ವಿಡಿಯೋ, ಆಡಿಯೋ, ರೀಲ್‌ಗಳು, ವರದಿ, ಲೇಖನ, ಕಮೆಂಟ್‌ಗಳನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದಲೂ ಅಳಿಸಲು ನಿರ್ದೇಶಿಸಿದೆ ಮತ್ತು ಅರ್ಜಿದಾರರ ವಿವರಗಳನ್ನು ಇ-ಕೋರ್ಟ್ ಸ್ಥಿತಿಯಲ್ಲಿ ಮರೆಮಾಡಲು ಕಚೇರಿಗೆ ಈ ಮೂಲಕ ನಿರ್ದೇಶಿಸಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು