Sunday, April 26, 2026
ಬೆಂಗಳೂರುಸುದ್ದಿ

ಹೊಸ ಕಾರು ಖರೀದಿಸಿದ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ

ನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ. ಇವರ ಮಾತಿಗೆ ಮರುಳಾಗದವರೇ ಇಲ್ಲ. ಕನ್ನಡಿಗರು ಪ್ರೀತಿಯಿಂದ ಮಾತಿನ ಮಲ್ಲಿ ಅಂತಲೇ ಬಿರುದು ಕೊಟ್ಟಿರುವ ಅನುಶ್ರೀಗೆ ಅವರ ವೃತ್ತಿ ಬದುಕಿನಲ್ಲಿ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಸದ್ಯ ಕನ್ನಡದಲ್ಲಿರುವ ಅತ್ಯಂತ ದುಬಾರಿ ನಾಯಕಿ ಎಂದೇ ಹೇಳಲಾಗುತ್ತಿದೆ.

ಅನುಶ್ರೀ ಕೇವಲ ನಿರೂಪಣೆ ಅಷ್ಟೇ ಸಿನಿಮಾಗಳಲ್ಲಿ ನಟಿಸಿರೋದು ಗೊತ್ತೇ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜೀ ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ಅನುಶ್ರೀಯವರೇ ನಿರೂಪಕಿ. ಸರಿಗಮಪದಿಂದ ಹಿಡಿದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಂತಹ ದುಬಾರಿ ರಿಯಾಲಿಟಿ ಶೋಗಳಿಗೆ ಇವರೇ ನಿರೂಪಕಿ. ಅನುಶ್ರೀ ಇಲ್ಲದೆ, ಈ ಶೋಗಳನ್ನು ನೋಡುವುದಕ್ಕೆ ಕಿರುತೆರೆ ವೀಕ್ಷಕರು ಇಷ್ಟಪಡುವುದಿಲ್ಲ. ಆಮಟ್ಟಿಗೆ ವೀಕ್ಷಕರನ್ನು ತನ್ನೆಡೆಗೆ ಸೆಳೆದು ಬಿಟ್ಟಿದ್ದಾರೆ. ಈಗ ಹೊಸ ಕಾರನ್ನು ಖರೀದಿ ಮಾಡಿ ಅನುಶ್ರೀ ಸುದ್ದಿಯಲ್ಲಿದ್ದಾರೆ.

ಕನ್ನಡದ ಟಾಪ್ ಆಂಕರ್ ಟಾಪ್ ಕಾರನ್ನು ಖರೀದಿ ಮಾಡಿದ್ದು, ಅದನ್ನು ತನ್ನ ಇನ್‌ಸ್ಟಾ ಸ್ಟೋರಿಯನ್ನು ಹಾಕಿಕೊಂಡಿದ್ದಾರೆ, ಅಂದ್ಹಾಗೆ ಆಂಕರ್ ಅನುಶ್ರೀ ಖರೀದಿಸಿದ ಹೊಸ ಕಾರು ಯಾವುದು? ಆ ಕಾರಿನ ಬೆಲೆ ಎಷ್ಟು? ಅನ್ನೋದನ್ನು ತಿಳಿಯಲು .

ಅನುಶ್ರೀ ಒಂದೊಂದು ಕಾರ್ಯಕ್ರಮವನ್ನು ನಿರೂಪಣೆ ಮಾಡುವುದಕ್ಕೆ ಲಕ್ಷಾಂತರ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ರಿಯಾಲಿಟಿ ಶೋ, ಸಿನಿಮಾ ಕಾರ್ಯಕ್ರಮಗಳು, ಟ್ಯೂಬ್ ಅಂತ ಇವರ ಸಂಭಾವನೆ ಯಾವ ಸ್ಟಾರ್‌ಗೂ ಕಮ್ಮಿಯಿಲ್ಲ. ಒಳ್ಳೆ ಸಂಭಾವನೆಯನ್ನೇ ಪಡೆಯುವ ನಟಿ ಸಿನಿಮಾದಲ್ಲೂ ಪ್ರಚಾರವನ್ನೂ ನಡೆಸಿಕೊಡುತ್ತಾರೆ. ಹೀಗಾಗಿ ಇವರ ಗಳಿಕೆ ಏನೂ ಕಮ್ಮಿಯಿಲ್ಲ. ಇನ್ನು ಅನುಶ್ರೀ ಖರೀದಿಸಿದ ಕಾರು ಯಾವುದೆಂದು ನೋಡುವುದಾರೇ

ಅಂದ್ಹಾಗೆ ಅನುಶ್ರೀ ಖರೀದಿಸಿದ ಹೊಸ ಕಾರಿನ ಹೆಸರು ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್. ನೀಲಿ ಬಣ್ಣದ ಈ ಕಾರು ನೋಡುವುದಕ್ಕಂತೂ ಸಖತ್ ಆಗಿದೆ. ಆನ್‌ಲೈನ್ ಈ ಕಾರಿನ ಬೆಲೆ ಭಲೇ ದುಬಾರಿ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿ. 25 ಲಕ್ಷದಿಂದ ಶುರುವಾದರೆ ಟಾಪ್ ಮಾಡಲ್ ₹40 ಲಕ್ಷದವರೆಗೂ ಹೋಗುತ್ತೆ. ಆದರೆ, ಅವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾರು ಯಾವ ವೇರಿಯೆಂಟ್ ಅನ್ನೋದು ಗೊತ್ತಾಗಿಲ್ಲ. ಸದ್ಯ ಈ ಕಾರಿನ ಬೆಲೆ ಅಂತೂ ದುಬಾರಿ ಅನ್ನೋದಂತೂ ಸದ್ಯ.

ಇನ್ನು ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್‌ನಲ್ಲೊಂದು ವಿಶೇಷತೆಯಿದೆ. ಈ ಕಾರು ಪೆಟ್ರೋಲ್ ಹಾಗೂ ಬ್ಯಾಟರಿ ಎರಡೂ ತಂತ್ರಜ್ಞಾನವನ್ನು ಹೊಂದಿದೆ. ಕಾರು ಚಲಾಯಿಸುವಾಗ ಬ್ಯಾಟರಿ ಮುಗಿದು ಹೋದರೆ, ಪೆಟ್ರೋಲ್‌ಗೆ ಶಿಫ್ಟ್ ಆಗಬಹುದು. ಇದರಿಂದ ಚಾರ್ಜಿಂಗ್ ಪಾಯಿಂಟ್ ಅನ್ನು ಹುಡುಕುವ ಅಗತ್ಯವಿರುವುದಿಲ್ಲ. ಅಲ್ಲಿದೆ ಕಾರಿನ ಮೈಲೇಜ್ ಕೂಡ ಸುಮಾರು 25 ಕಿ.ಮೀ ಪ್ರತಿ ಲೀಟರ್‌ಗೆ ನೀಡುತ್ತದೆ ಎಂದು ಹೇಳಲಾಗಿದೆ.

ಇನ್ನು ಈ ಕಾರಿನ ಬೆಲೆಯಂತೆಯೇ ಸೌಲಭ್ಯಗಳನ್ನು ನೀಡಲಾಗಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್‌ನಲ್ಲಿ ಸನ್‌ರೂಫ್ ಇದೆ. ಆಟೊಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಅತ್ಯಾಧುನಿಕ ಏಡಾಸ್ ತಂತ್ರಜ್ಞಾನ, ಅತ್ಯದ್ಭುತ ಮ್ಯೂಸಿಕ್ ಸಿಸ್ಟಂ, ಇಂಟಿರೀಯರ್, ಏರ್ ಬ್ಯಾಗ್‌ಗಳು ಸೇಫ್ಟಿ ಸೇರಿದಂತೆ ಹಲವು ಸೌಲಭ್ಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಟೊಯೊಟಾ ಕಾರಿನ ಇಂಜಿನ್‌ಗಳು ಬಾಳಿಕೆಗೆ ಹೆಸರುವಾಸಿಯಾಗಿವೆ. ಹಾಗೇ ಸೆಫ್ಟಿ ವಿಚಾರದಲ್ಲೂ ಕೂಡ ಮುಂದಿದೆ. ಹೀಗಾಗಿ ಅನುಶ್ರೀ ಈ ಕಾರನ್ನು ಖರೀದಿ ಮಾಡಿರಬಹುದೆಂದು ಫ್ಯಾನ್ಸ್ ಗೆಸ್ ಮಾಡುತ್ತಿದ್ದಾರೆ. ಇನ್ನು ಅನುಶ್ರೀ ತಮ್ಮ ಕಾರಿಗೆ ಎಕ್ಸ್ಟ್ರಾ ಫಿಟಿಂಗ್ ಕೂಡ ಮಾಡಿಸಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.