ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ತಕ್ಷಣ ಮುಸ್ಲಿಮ್ ಮುಖಂಡರೊಂದಿಗೆ ಸಭೆ ನಡೆಸಿದ ಗೃಹ ಮಂತ್ರಿ ಡಾ.ಜಿ ಪರಮೇಶ್ವರ್ ಹಾಗೂ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್-ಕಹಳೆ ನ್ಯೂಸ್

ಮಂಗಳೂರು: ಬಜ್ಪೆಯ ಕಿನ್ನಿಪದವಿನಲ್ಲಿ ಮತೀಯವಾದಿಗಳಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಸಾವಿನಿಂದ ಪೂರ್ತಿ ದಕ್ಷಿಣ ಕನ್ನಡ ಜಿಲ್ಲೆಯೇ ಸ್ತಬ್ದವಾಗಿದೆ. ಈ ನಡುವೆ ರಾಜ್ಯ ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಜಿಲ್ಲೆಗೆ ಆಗಮಿಸಿದ ತಕ್ಷಣ ಮುಸ್ಲಿಮ್ ಮುಖಂಡರುಗಳೊಂದಿಗೆ ಸಭೆ ನಡೆಸಿದ್ದಾರೆ.
ಹತ್ಯೆಯಾದ ಹಿಂದೂ ಕಾರ್ಯಕರ್ತನ ಸಾವಿಗೆ ನ್ಯಾಯ ನೀಡಬೇಕಾದ ಸರಕಾರವೇ ಹಿಂದೂ ನಾಯಕರನ್ನು ಹಾಗೂ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಜೊತೆ ಸಭೆ ನಡೆಸದೆ ಮುಸ್ಲಿಮ್ ಮುಖಂಡರ ಜೊತೆ ಸಭೆ ನಡೆಸಿ `ನಿಮ್ಮ ಜೊತೆ ನಾವಿದ್ದೇವೆ´ ಎಂದು ಓಲೈಕೆ ರಾಜಕಾರಣವನ್ನು ಮುಂದುವರಿಸಿದ್ದಾರೆ. ಇಂತಹ ನಡೆಯಲ್ಲಿರುವ ಇವರುಗಳಿಂದ ಹಿಂದೂ ಸಮಾಜ ಹಾಗೂ ಮೃತ ಸುಹಾಸ್ ಶೆಟ್ಟಿಗೆ ನ್ಯಾಯ ದೊರಕಬಹುದು ಎಂಬುದನ್ನು ಹೇಗೆ ನಿರೀಕ್ಷೆ ಮಾಡಲು ಸಾಧ್ಯ.
ಇದೀಗ ಜಿಲ್ಲೆಯಲ್ಲಿ ಪೊಲೀಸರು Anti Communal Force ಪ್ರಾರಂಭಮಾಡಲಿದ್ದು, ಇದು Anti Communal Force ಅಲ್ಲ ಹಿಂದೂ ನಾಯಕರನ್ನು ಹಾಗೂ ಹಿಂದೂ ಕಾರ್ಯಕರ್ತರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ Anti Hindu Force ಎಂಬುದು ಸಮಾಜಕ್ಕೆ ಸ್ಪಷ್ಟವಾಗುತ್ತಿದೆ.
– ಡಾ. ವೈ ಭರತ್ ಶೆಟ್ಟಿ , ಶಾಸಕರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ














