Tuesday, March 10, 2026
ದೆಹಲಿಸುದ್ದಿ

BREAKING NEWS : ಏಪ್ರಿಲ್’ನಲ್ಲಿ ಭರ್ಜರಿ ‘GST’ ಸಂಗ್ರಹ : ಸಾರ್ವಕಾಲಿಕ ಗರಿಷ್ಟ 2.37 ಲಕ್ಷ ಕೋಟಿ ರೂ.ಗೆ ಏರಿಕೆ – ಕಹಳೆ ನ್ಯೂಸ್

ನವದೆಹಲಿ: ಏಪ್ರಿಲ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.6ರಷ್ಟು ಹೆಚ್ಚಾಗಿದ್ದು, ದಾಖಲೆಯ ₹2.37 ಲಕ್ಷ ಕೋಟಿಗಳಿಗೆ ತಲುಪಿದೆ ಎಂದು ಗುರುವಾರ ಸರ್ಕಾರಿ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

2024ರ ಏಪ್ರಿಲ್ ತಿಂಗಳ ಜಿಎಸ್‌ಟಿ ಸಂಗ್ರಹವು ₹2.10 ಲಕ್ಷ ಕೋಟಿಗಳಷ್ಟಿತ್ತು. 2017 ಜುಲೈ 1ರಿಂದ ಪರೋಕ್ಷ ತೆರಿಗೆ ಪದ್ಧತಿ ಜಾರಿಗೆ ಬಂದ ನಂತರದ ಎರಡನೇ ಅತ್ಯಧಿಕ ಸಂಗ್ರಹ ಇದಾಗಿದೆ. 2025ರ ಮಾರ್ಚ್ ತಿಂಗಳಲ್ಲಿ ₹1.96 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ.

ಜಾಹೀರಾತು
ಜಾಹೀರಾತು

ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಆದಾಯವು ಶೇ 10.7 ರಷ್ಟು ಹೆಚ್ಚಾಗಿ ಸುಮಾರು ₹1.9 ಲಕ್ಷ ಕೋಟಿಗಳಿಗೆ ತಲುಪಿದ್ದರೆ, ಆಮದು ಮಾಡಿಕೊಂಡ ಸರಕುಗಳಿಂದ ಬರುವ ಆದಾಯವು ಶೇ 20.8ರಷ್ಟು ಹೆಚ್ಚಾಗಿ ₹46,913 ಕೋಟಿಗಳಿಗೆ ತಲುಪಿದೆ.

ಮರುಪಾವತಿ ವಿತರಣೆಯು ಏಪ್ರಿಲ್‌ನಲ್ಲಿ ಶೇ 48.3 ರಷ್ಟು ಹೆಚ್ಚಾಗಿ ₹27,341 ಕೋಟಿಗಳಿಗೆ ತಲುಪಿದೆ.

ಮರುಪಾವತಿಗಳನ್ನು ಸರಿಹೊಂದಿಸಿದ ನಂತರ, ನಿವ್ವಳ ಜಿಎಸ್‌ಟಿ ಸಂಗ್ರಹವು ಏಪ್ರಿಲ್‌ನಲ್ಲಿ ಶೇ 9.1 ರಷ್ಟು ಹೆಚ್ಚಾಗಿ ₹2.09 ಲಕ್ಷ ಕೋಟಿಗೆ ತಲುಪಿದೆ.