ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ ; ಅನುರಾಗ್ ಕಶ್ಯಪ್ ಹೇಳಿಕೆಗೆ ವ್ಯಾಪಕ ಆಕ್ರೋಶ – ಕಹಳೆ ನ್ಯೂಸ್

ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ. ಇದು ಬಾಲಿವುಡ್‌ನಿಂದ ಓಡಿ ಹೋದ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ನೀಡಿದ ಪ್ರತಿಕ್ರಿಯೆ. ಈ ಪ್ರತಿಕ್ರಿಯೆ ಭಾರಿ ವಿವಾದ ಸೃಷ್ಟಿಯಾಗಿದೆ. ಪ್ರತಿಭಟನೆ ಜೋರಾಗಿದೆ. ಫುಲೆ ಸಿನಿಮಾದಿಂದ ಆರಂಭಗೊಂಡ ವಿವಾದಕ್ಕೆ ಅನುರಾಗ್ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಮುಂಬೈ(ಏ.18) ಬಾಲಿವುಡ್‌ನಲ್ಲಿ ಮಿಂಚಿದ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಬಾಲಿವುಡ್ ಬಿಟ್ಟು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ನೀಡುತ್ತಿರುವ ಹೇಳಿಕೆ ಅನುರಾಗ್ ಕಶ್ಯಪ್‌ನನ್ನು ದಕ್ಷಿಣ ಭಾರತದಿಂದಲೂ ಕಾಲ್ಕೀಳುವಂತೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದೀಗ ಅನುರಾಗ್ ಕಶ್ಯಪ್ ನೀಡಿದ ಪ್ರತಿಕ್ರಿಯೆಯಿಂದ ದೇಶದ ಬ್ರಾಹ್ಮಣ ಸಮುದಾಯ ಕೆರಳಿ ಕೆಂಡವಾಗಿದೆ. ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? ಎಂದು ಅನುರಾಗ್ ಕಶ್ಯಪ್ ಪ್ರಶ್ನಿಸಿದ್ದಾರೆ. ಈ ಪ್ರತಿಕ್ರಿಯೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಭಾರಿ ವಿವಾದ ಸೃಷ್ಟಿಯಾಗಿದೆ. ಪ್ರತಿಭಟನೆ ಜೋರಾಗಿದೆ.













