Wednesday, March 11, 2026
ಅಂತಾರಾಷ್ಟ್ರೀಯಸುದ್ದಿ

ರೆಕ್ಕೆ ತುಂಡಾಗಿ ನದಿಗೆ ಬಿದ್ದ ಹೆಲಿಕ್ಯಾಪ್ಟರ್‌ – ಕುಟುಂಬ ಸಹಿತ ಉದ್ಯಮಿ ದಾರುಣ ಸಾವು : ಭಯಾನಕ ವಿಡಿಯೋ ವೈರಲ್ -ಕಹಳೆ ನ್ಯೂಸ್

ನ್ಯೂಯಾರ್ಕ್‌ : ಮಾರ್ಗಮಧ್ಯದಲ್ಲಿಯೇ ರೆಕ್ಕೆ ತುಂಡಾಗಿ ಹೆಲಿಕ್ಯಾಪ್ಟರ್‌ ಒಂದು ನದಿಗೆ ಬಿದ್ದ ಪರಿಣಾಮ ಮೂವರು ಮಕ್ಕಳೂ ಸೇರಿದಂತೆ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನ್ಯೂಯಾರ್ಕ್‌ ನ ಹಡ್ಸನ್‌ ನದಿ ಪಾತ್ರದಲ್ಲಿ ನಡೆದಿದೆ.


ಮೃತಪಟ್ಟವರು ಸ್ಪೇನ್‌ ನಿಂದ ಬಂದಿದ್ದ ಪ್ರಯಾಣಿಕರು ಹಾಗೂ ಹೆಲಿಕ್ಯಾಪ್ಟರ್‌ ಪೈಲೆಟ್‌ ಎಂದು ತಿಳಿದುಬಂದಿದೆ. ಎಸ್ಕೋಬಾರ್‌ ಎಂಬಾತ ಸ್ಪೇನ್‌ನ ಖ್ಯಾತ ಉದ್ಯಮಿಯಾಗಿದ್ದು ತನ್ನ ಪತಿ ಮತ್ತು ಮೂವರು ಮಕ್ಕಳೊಂದಿಗೆ ಪ್ರವಾಸಕ್ಕೆ ಬಂದಿದ್ದರು. ಪೈಲೆಟ್‌ ಸೇರಿದಂತೆ ಕುಟುಂಬದ ಎಲ್ಲರೂ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಡಿಯೋ

ಜಾಹೀರಾತು
ಜಾಹೀರಾತು

ಅವಘಡಕ್ಕೆ ಖಚಿತ ಕಾರಣ ಇನ್ನೂ ತಿಳಿದುಬಂದಿಲ್ಲ.

 

ಸ್ಥಳೀಯ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆಯುವಲ್ಲಿ ನಿರತರಾಗಿದ್ದಾರೆ. ಅಪಘಾತದ ನಡೆದ ಸಮಯದಲ್ಲಿ ಮೋಡಗಳು ಆವರಿಸಿದ್ದ ಕಾರಣ ಕಣ್ಣೆದುರಿನ ದೃಶ್ಯ ಕಾಣದೇ ಈ ಅವಘಡ ನಡೆದಿರಬಹುದೆಂದು ನ್ಯಾಷನಲ್‌ ಟ್ರಾನ್ಸಪೋರ್ಟೇಷನ್‌ ಸೇಫ್ಟಿ ಬೋರ್ಡ್‌ ತಿಳಿಸಿದೆ.