Monday, May 4, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಮ್ಟಾಡಿಯ ರೀಚಾ ಶಿಪಾಲಿ ಡಿಸೋಜ- ಕಹಳೆ ನ್ಯೂಸ್

ಬಂಟ್ವಾಳ: ಕಳೆದ ಮೇ ತಿಂಗಳಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಬಂಟ್ವಾಳದ ಅಮ್ಟಾಡಿಯ ರೀಚಾ ಶಿಪಾಲಿ ಡಿಸೋಜ ಅವರು ತೇರ್ಗಡೆ ಹೊಂದಿದ್ದಾರೆ.

ಇವರು ಪ್ರೌಢ ಶಿಕ್ಷಣವನ್ನು ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಸ್.ವಿ.ಎಸ್.ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದರು. ಮಂಗಳೂರಿನ ಕಂಕನಾಡಿ ರಾಜನ್ ಡಿಸೋಜ ಅವರಿಂದ ಸಿಎ ತರಬೇತಿ ಹಾಗೂ ಮುಂಬಯಿನ ದೋಯ್ಜಿ ಬ್ಯಾಂಕಿನಲ್ಲಿ ಕೈಗಾರಿಕಾ ತರಬೇತಿ ಪಡೆದಿದ್ದರು. ಅವರು ಅಮ್ಟಾಡಿ ಬಡಾಜೆಯ ರೊನಾಲ್ಡ್ ಡಿಸೋಜ ಹಾಗೂ ಕ್ರಿಸ್ತಿನ್ ಡಿಸೋಜ ಅವರ ಪುತ್ರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು