Recent Posts

Thursday, September 17, 2026
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರಿನ ವಾಮಂಜೂರು ಮೈದಾನದ ಶೇಂದಿ ಅಂಗಡಿ ಬಳಿ ನಿಷೇಧಿತ ಮಾದಕ ವಸ್ತು ಸಮೇತ ಆರೋಪಿ ದಾವೂದು ಪರ್ವೇಜ್ ವಶಕ್ಕೆ – ಕಹಳೆ ನ್ಯೂಸ್

ಮಂಗಳೂರು, ಮೇ. 15: ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಮೇತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮೇ.14ರಂದು ಮಂಗಳೂರಿನ ವಾಮಂಜೂರು ಮೈದಾನದಲ್ಲಿರುವ ಶೇಂದಿ ಅಂಗಡಿ ಬಳಿ ನಡೆದಿದೆ.

ಜಾಹೀರಾತು

ಪೆರ್ಮನ್ನೂರ ಗ್ರಾಮ ನಿತ್ಯಾಧರ ಚರ್ಚ್ ಬಳಿ ದಾರಂದ ಬಾಗಿಲು ಮನೆ ನಿವಾಸಿ ದಾವೂದು ಪರ್ವೇಜ್(37) ಬಂಧಿತ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಿಷೇಧಿತ ಮಾದಕ ವಸ್ತು ಸುಮಾರು 10 ಗ್ರಾಂ ತೂಕದ ಅಂದಾಜು 15,000 ರೂ. ಮೌಲ್ಯದ ಎಂಡಿಎಂಎ ಹಾಗೂ ಹಾಗೂ 810 ರೂ ನಗದನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ನಿರ್ದೇಶನದಂತೆ, ಮಂಗಳೂರು ನಗರ ಉಪ-ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಆರೋಪಿಯನ್ನು ಬಂಧಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ.ಎನ್.ನಾಯಕ ನೇತೃತ್ವದಲ್ಲಿ ಆಂಟಿ ಡ್ರಗ್ ಟೀಂನ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್‍ ಠಾಣಾ ಪಿಎಸ್‍ಐ ಅರುಣ್ ಕುಮಾರ್‍ ಡಿ ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.