Thursday, March 19, 2026
ಸುದ್ದಿ

ಉಡುಪಿ : ಎಂಜಿಎo ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ‘ಅಮೃತ ಸಂಗಮ’ – ಕಹಳೆ ನ್ಯೂಸ್

ಉಡುಪಿ : ಮಹಾತ್ಮಾ ಗಾಂಧಿ ಮೆಮೋರಿಯಲ್ (ಎಂಜಿಎo) ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಡಿಸೆಂಬರ್ ನಿನ್ನೆ ಕಾಲೇಜಿನ ಆವರಣದಲ್ಲಿ “ಅಮೃತ ಸಂಗಮ’ ಕಾರ್ಯಕ್ರಮ ಸಂಪನ್ನಗೊoಡಿತ್ತು


ಬೆಳಗ್ಗೆ ಮಾಧವ ರಕ್ಷಾ ಆಡಳಿತ ಸೌಧ ಆವರಣದಲ್ಲಿರುವ ಡಾ| ಟಿಎಂಎ ಪೈ ಅವರ ಪುತ್ಥಳಿಗೆ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮ ಆರಂಭಗೊAಡಿತು.ಬಳಿಕ ಹಳೇ ವಿದ್ಯಾರ್ಥಿಗಳ ಕಾಲೇಜಿನ ಬದುಕನ್ನು ನೆನಪಿಸುವ ಫೋಟೋ ಗ್ಯಾಲರಿ ಪ್ರದರ್ಶನದ ಉದ್ಘಾಟನೆಯು ಗೀತಾಂಜಲಿ ಸಭಾಭವನದಲ್ಲಿ ನಡೆಯಿತು.
ಅನಂತರ ಎಂಜಿಎA ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ಅಮೃತ ಸಂಗಮ ಕಾರ್ಯಕ್ರಮವನ್ನು ಮುದ್ದಣ ಮಂಟಪದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಹಳೇ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟಗಳು, ಪ್ರತಿಭಾ ವೈಭವಗಳ ಅನಾವರಣ ನಡೆದಿದ್ದು .ಈ ಅವಿಸ್ಮರಣೀಯ ಸಂಗಮಕ್ಕೆ ದೂರದೂರುಗಳಿಂದ ಸಾವಿರಾರು ಮಂದಿ ಹಳೆ ವಿದ್ಯಾರ್ಥಿಗಳು ಎಂಜಿಎo ಕಾಲೇಜಿಗೆ ಆಗಮಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು