ಬೀದಿಬದಿ ವ್ಯಾಪಾರಿಗಳಿಗೆ ಗುಡ್‌ನ್ಯೂಸ್ : ಶೀಘ್ರವೇ ಹಲವು ಜಿಲ್ಲೆಗಳಲ್ಲಿ ವೆಂಡಿಂಗ್ ಝೋನ್ ಮತ್ತು ಫುಡ್ ಸ್ಟ್ರೀಟ್ ಆರಂಭ, – ಕಹಳೆ ನ್ಯೂಸ್

ಪಟ್ಟಣ ವ್ಯಾಪಾರ ಸಮಿತಿ ವೆಂಡಿಂಗ್ ಝೋನ್ ತೆರೆಯಲು ಜಾಗಗಳ ಹುಡುಕಾಟ ನಡೆದಿದ್ದು, ಇನ್ನೇನು ಶೀಘ್ರವೇ ಎಲ್ಲವೂ ಅಂತಿಮವಾಗಲಿವೆ. ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಮೈಸೂರು, ತುಮಕೂರು, ಹಾಸನ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವೆಂಡಿಂಗ್ ಝೋನ್ ಮತ್ತು ಫುಡ್ ಸ್ಟ್ರೀಟ್ ಆರಂಭವಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ವೆಂಡಿಂಗ್ ಝೋನ್ ಹಾಗೂ ನೋ ವೆಂಡಿಂಗ್ ಝೋನ್‌ಗಳು ತಲೆಎತ್ತಲಿವೆ.
ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲಕ್ಕಾಗಿ ವೆಂಡಿಂಗ್ ಝೋನ್ ತೆರೆಯಲಾಗುವುದು. ಈ ಬಗ್ಗೆ ಪಟ್ಟಣ ವ್ಯಾಪಾರ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.









