Tuesday, April 28, 2026
ಸುದ್ದಿ

ಸುಳ್ಯದ ಪರಿವಾರಕಾನ ಬಳಿ ಕುಸಿದ ಭೂಮಿ ಹೋಟೆಲ್ ಮುಂಬಾಗದಲ್ಲಿ ಬೃಹದಾಕರದ ಕಂದಕ ನಿರ್ಮಾಣ – ಕಹಳೆ ನ್ಯೂಸ್

ಸುಳ್ಯದ ಪರಿವಾರಕಾನದಲ್ಲಿನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು, ಈ ಫೋಟೋ ಹಾಗೂ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದೆ.

ಕಳೆದೆರಡು ದಿನಗಳಿಂದ ಸುಳ್ಯದಲ್ಲಿ ರಾತ್ರಿಯಾಗುತ್ತಿದ್ದಂತೆ ಜೋರಾದ ಮಳೆ‌ ಸುರಿದಿದ್ದು, ಈ ಹಿನ್ನಲೆಯಲ್ಲಿ ಭೂಕುಸಿತ ಆಗಿದೆ ಎನ್ನುವುದು ಕೆಲವರ ಹೇಳಿಕೆ. ಆದರೆ ಇಂಟರ್ ಲಾಕ್ ಅಳವಡಿಸಿರುವ ಭೂಮಿಯಡಿ ನೀರು ರಭಸವಾಗಿ ನುಗ್ಗದಿದ್ದರೂ ಭೂಕುಸಿತ ಹೇಗೆ ಸಂಭವಿಸಿತು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಅದು ಅಲ್ಲದೇ ಗುಂಡಿ ಪಕ್ಕದಲ್ಲಿ ಇರುವ ವಿದ್ಯುತ್ ಕಂಬವೂ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಪ್ರತಿ ದಿನವೂ ಹೋಟೆಲ್ ಗೆ ಬರುವ ಕಾರುಗಳು ಅಲ್ಲಿ ಕೂಡ ಪಾರ್ಕಿಂಗ್ ಮಾಡುತ್ತಿದ್ದರು. ಆದರೆ ಇಂದು ಅದೃಷ್ಟವಶಾತ್ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು