
ಕೆವಿಜಿ ಸಮೂಹ ಸಂಸ್ಥೆಗಳ ಮಾತೃಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಯುಧ ಪೂಜೆ ಮತ್ತು ಶಾರದಾ ಪೂಜೆ ನಡೆಸಲಾಯಿತು.
ಕಾಲೇಜಿನ ವಿವಿಧ ಘಟಕಗಳ ಕಚೇರಿಗಳು, ವಿಭಾಗಗಳು ಮತ್ತು ಪ್ರಯೋಗಾಲಯಗಳಲ್ಲಿ ಆಯುಧ ಪೂಜೆ ಕಾಲೇಜು ಮುಂಭಾಗದಲ್ಲಿ ವಾಹನ ಪೂಜೆ ನೆರವೇರಿಸಿ ಮುಖ್ಯ ಕಚೇರಿಯಲ್ಲಿ ಶಾರದಾ ಮಾತೆಗೆ ಪೂಜೆ ಸಲ್ಲಿಸಲಾಯಿತು.

ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ ಎಂ, ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಸಾವಿತ್ರಿ ಎನ್, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ, ಕಛೇರಿ ಅಧೀಕ್ಷಕಿ ನಿವೇದಿತಾ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು, ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಜೋಸ್ಬಿನ್ ಬಾಬು, ನಿರೀಕ್ಷಾ, ಯಶಿಕಾ, ಮೇಘನಾ, ಕುಲಶ್ರೀ ಮತ್ತು ತರಗತಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.















