Tuesday, March 10, 2026

archivekahale news

ಸುದ್ದಿ

ನರ ದೌರ್ಬಲ್ಯ ಕಾಯಿಲೆಯಿಂದ ಮೃತಪಟ್ಟಿರುವ ಭಾಸ್ಕರ ಎಂಬವರ ಮನೆಗೆ ಭೇಟಿ ನೀಡಿ ಆರ್ಥಿಕ ನೆರವನ್ನು ನೀಡಿದ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ಕಸಬ ಗ್ರಾಮದ ರಾಘವೇಂದ್ರ ಮಠದ ಬಳಿಯ ನಿವಾಸಿ ಭಾಸ್ಕರ ಎಂಬವರು ನರ ದೌರ್ಬಲ್ಯ ಕಾಯಿಲೆಗೆ ತುತ್ತಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇತ್ತೀಚೆಗೆ ಮೃತಪಟ್ಟಿರುತ್ತಾರೆ. ಇವರ ಮನೆಯ ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗಿದ್ದು, ಈ ವಿಚಾರವನ್ನು ತಿಳಿದ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಮೃತರ ಮನೆಗೆ ಭೇಟಿ ನೀಡಿ ಮನೆಯ ಸದಸ್ಯರಿಗೆ ಆರ್ಥಿಕ ನೆರವನ್ನು ನೀಡಿದರು. ಈ...
ಸುದ್ದಿ

ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ; ‘ಅರೈಸ್‌ ಅವೇಕ್‌’ ಪಾರ್ಕ್‌ ಲೋಕಾರ್ಪಣೆ – ಕಹಳೆ ನ್ಯೂಸ್

ಮಹಾನಗರ: ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶುಭ ಘಳಿಗೆಯಲ್ಲಿ ಕರಂಗಲ್ಪಾಡಿಯಲ್ಲಿ ನವೀಕೃತಗೊಳಿಸಿರುವ ಅಕ್ಯುಪ್ರಶರ್‌ ವಾಕಿಂಗ್‌ ಟ್ರ್ಯಾಕ್ 'ಅರೈಸ್‌ ಅವೇಕ್‌' ಪಾರ್ಕನ್ನು ರವಿವಾರ ಉದ್ಘಾಟಿಸಲಾಯಿತು. ಶಾಸಕ ಜೆ.ಆರ್‌. ಲೋಬೋ ಅವರು ಪಾರ್ಕ್‌ ಉದ್ಘಾಟಿಸಿದರು. ಮನಸ್ಸಿನ ಸ್ವಚ್ಛತೆಯಿಂದ ಎಲ್ಲವೂ ಸಾಧ್ಯವಾಗುತ್ತದೆ. ರಾಮಕೃಷ್ಣ ಮಠದವರು ಮಾಡುತ್ತಿರುವ ಸ್ವಚ್ಛತಾ ಅಭಿಯಾನ ಸಾಕಷ್ಟು ಮಂದಿಯ ಮನಸ್ಸು ಪರಿವರ್ತನೆಯ ಜತೆಯಲ್ಲಿ ಜಾಗೃತಿಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಮಾತನಾಡಿ,...
ಸುದ್ದಿ

ಜಿಲ್ಲಾಧಿಕಾರಿ ಡಿಸಿ ದೀಪ್ತಿ ಅದಿತ್ಯಾ ಕಾನಡೆ ತಲೆಗೆ ಹೊಡೆದ ಸಿಎಂ – ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ ಎಚ್ಚರಿಸಿದ ಜಿಲ್ಲಾಧಿಕಾರಿ ಡಿಸಿ ದೀಪ್ತಿ ಅದಿತ್ಯಾ ಕಾನಡೆ ತಲೆಗೆ ಹೊಡೆದು ಹೆದರಬೇಡ ಅಂತಾ ಸಿಎಂ ಹೇಳಿರುವ ಘಟನೆಯೊಂದು ಇಂದು ನಡೆದಿದೆ. ಇಂದು ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ನೂತ ಮೆಗಾಡೈರಿ ಉದ್ಘಾಟನೆಗಾಗಿ ಆಗಮಿಸಿದ್ರು. ಆದ್ರೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೇವಲ ಭೇಟಿ ನೀಡಿ ವೀಕ್ಷಣೆ ಮಾಡಿದ್ರು. ಈ ವೇಳೆ ಜಿಲ್ಲಾಧಿಕಾರಿಗಳು ಸಿಎಂ ಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ...
ಸುದ್ದಿ

2018ರ ಕರ್ನಾಟಕ ಮಹಾಯುದ್ಧ: ಮೇ 12ಕ್ಕೆ ಚುನಾವಣೆ, ಮೇ 15ಕ್ಕೆ ಫಲಿತಾಂಶ

ನವದೆಹಲಿ: ಬಹುನೀರಿಕ್ಷಿತ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ 18ರಂದು ಫಲಿತಾಂಶ ಘೋಷಣೆಯಾಗಲಿದೆ ಅಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಹೇಳಿದ್ದಾರೆ. ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿ ನಿರ್ವಾಚನ್ ಸದನ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 4.96 ಕೋಟಿ ಮತದಾರರಿದ್ದಾರೆ....
ಸುದ್ದಿ

ಡೋಕ್ಲಾಂ ಯಾವುದೇ ಸ್ಥಿತಿ ಎದುರಿಸಲು ನಾವು ಸಿದ್ಧ – ರಕ್ಷಣಾ ಸಚಿವೆ

ಡೆಹರಾಡೂನ್‌ : "ನಾವು ಕಟ್ಟೆಚ್ಚರದಿಂದ ಇದ್ದೇವೆ; ಡೋಕ್ಲಾಂ ನಲ್ಲಿ ಯಾವುದೇ ಅನಿರೀಕ್ಷಿತ ವಿದ್ಯಮಾನ ಸಂಭವಿಸಿದರೂ ಅದನ್ನು ಎದುರಿಸುವುದಕ್ಕೆ ನಾವು ಸಮರ್ಥರಿದ್ದೇವೆ' ಎಂದು ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ದೇಶದ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಉತ್ತರಾಖಂಡಕ್ಕೆ ಭೇಟಿ ನೀಡಿರುವ ನಿರ್ಮಲಾ ಅವರು "ದೇಶದ ಸೇನೆಯನ್ನು ನಿರಂತರವಾಗಿ ಆಧುನೀಕರಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ' ಎಂದು ಹೇಳಿದರು. ಭಾರತದ ಶಕ್ತಿಯುತ ಸೇನಾ ಪಡೆಯು ದೇಶದ...
ಸಿನಿಮಾ

ಅಭಿನಯ ಶಾರದೆಗೆ ಮುಂದುವರೆದ ಚಿಕಿತ್ಸೆ- ಆಸ್ಪತ್ರೆಯತ್ತ ಸಿನಿ ಕಲಾವಿದರು

ಬೆಂಗಳೂರು: ಚಂದನವನ ಕಲಾ ಶಾರದೆ ಜಯಂತಿ ಸೋಮವಾರ ಉಸಿರಾಟದ ತೊಂದರೆಯಿಂದಾಗಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 30 ವರ್ಷಗಳಿಂದಲೂ ಜಯಂತಿ ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ರು. ಆದ್ರೆ ನಿತ್ಯ ಔಷಧಿ ತೆಗೆದುಕೊಳ್ಳುತ್ತಿದ್ದರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದ್ರೆ ಭಾನುವಾರ ರಾತ್ರಿ ಏಕಾಏಕಿ ಉಸಿರಾಟದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವೈದ್ಯರ ಸಲಗಹೆ ಮೇರೆಗೆ ಜಯಂತಿ ಅವರನ್ನು ಮಗ ಕೃಷ್ಣಮೂರ್ತಿ ಆಸ್ಪತ್ರೆಗೆ ದಾಖಲಿಸಿದ್ರು. ಇತ್ತ ಜಯಂತಿ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ನಂತರ ಸ್ಯಾಂಡಲ್‍ವುಡ್ ಹಿರಿಯ,...
Ashok Kumar Rai
ಸುದ್ದಿ

ಅಶೋಕ್ ಕುಮಾರ್ ರೈ ವ್ಯಕ್ತಿಯಲ್ಲ ಶಕ್ತಿ ; ರೈ ಎಸ್ಟೇಟ್ಸ್ ಟ್ರಸ್ಟ್,ಜನಸೇವಾ ಕೇಂದ್ರದ ಫಲಾನುಭವಿಗಳ ಮತ್ತು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸಮಾವೇಶದಲ್ಲಿ – ಡಿ.ವಿ. ಸದಾನಂದ ಗೌಡ

ಪುತ್ತೂರು : ಸಮಾಜದಿಂದ ನಾವು ಏನನ್ನು ಪಡೆದಿದ್ದೇವೋ, ಅದನ್ನು ಮರಳಿ ಸಮಾಜಕ್ಕೆ ನೀಡುವ ಮನೋಪ್ರವೃತ್ತಿ ಪ್ರತಿಯೊಬ್ಬರಲ್ಲೂ ಬರಬೇಕು. ಆಗ ಮಾತ್ರ ನಮ್ಮ ಋಣ ಈಡೇರಲು ಸಾಧ್ಯವಿದೆ. ಸವಲತ್ತುಗಳಿಗೆ ಕೇವಲ ಸರಕಾರಗಳನ್ನೇ ಅವಲಂಬಿಸಿದರೆ ಸಾಲದು. ಸಂಘ-ಸಂಸ್ಥೆಗಳು ಕೂಡಾ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಅಶಕ್ತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಅನುಷ್ಠಾನ ಖಾತೆ...
ಸುದ್ದಿ

ಜುಲೈನಿಂದ ಆಧಾರ್ ಗೆ ಮುಖ ದೃಢೀಕರಣ – ಕಹಳೆ ನ್ಯೂಸ್

ಮಾ,26: ಈ ಹಿಂದೆ ಇದ್ದ, ಬೆರಳಚ್ಚು, ಕಣ್ಣಿನ ಸ್ಕ್ಯಾನ್ ಜತೆಗೆ ಮುಖ ಗುರುತಿಸುವ ಮೂಲಕ ಆಧಾರ್‌ ದೃಢೀಕರಣದ ತಂತ್ರಜ್ಞಾನವನ್ನು ಜುಲೈ 1ರಿಂದ ಜಾರಿಗೆ ತರಲು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ರೆಡಿ ಮಾಡಿಕೊಂಡಿದೆ.ವಯೋಸಹಜ ಸಮಸ್ತೆ ಇರುವವರು, ಬೆರಳಚ್ಚು ಸ್ಪಷ್ಟವಾಗಿ ಮೂಡದೇ ಇರುವವರಿಗೆ, ಕುಷ್ಟರೋಗಿಗಳಿಗೆ ನೆರವಾಗಲೆಂದು ಮುಖ ದೃಢೀಕರಣ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದು ಯುಐಡಿಎಐ ಜನವರಿಯಲ್ಲೇ ಘೋಷಿಸಿತ್ತು. ಕೇವಲ ಮುಖ ದೃಢೀಕರಣ ಮಾತ್ರವಲದೇ ಇದರ ಜತೆಗೆ ಬೇರೊಂದು ಗುರುತಿನ ದೃಢೀಕರಣವೂ...
1 1,449 1,450 1,451 1,452 1,453 1,459
Page 1451 of 1459