ಬಿಜೆಪಿ ಚಾರ್ಜ್‌ಶೀಟ್ ಪ್ರಮಾದ ; ಮಾನನಷ್ಟ ದಾವೆ ಹೂಡುವೆ – ಪ್ರತಿಭಾ ಕುಳಾಯಿ
ಮಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿದ ಚಾರ್ಜ್ ಶೀಟ್‌ನಲ್ಲಿ ತನ್ನ ಫೋಟೊ ಮತ್ತು ಹೆಸರು ಬಳಕೆ ಮಾಡಿದ್ದನ್ನು ಆಕ್ಷೇಪಿಸಿ ಮಂಗಳೂರು ಮನಪಾ ಕಾರ್ಪೊರೇಟರ್ ಕಾಂಗ್ರೆಸ್‌ನ ಪ್ರತಿಭಾ ಕುಳಾಯಿ ಅವರು ಕೇಂದ್ರ ಕಾನೂನು ಸಚಿವರ ವಿರುದ್ಧ ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾರೆ. ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರ ವಿರುದ್ಧ ಮಾನನಷ್ಟ...







