ಕನ್ನಡಾಭಿಮಾನ ಬೆಳೆಸಿ, ಅಂಧಾಭಿಮಾನ ಬೇಡ – ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಅರ್ತಿಕಜೆ
ಬನ್ನೂರು: ಕನ್ನಡ ಭಾಷೆ ಈ ನಾಡಿನ ಆಡಳಿತ ಭಾಷೆ. ನಮ್ಮ ನಾಡಿನ ಎಲ್ಲ ಸಂಸ್ಕೃತಿಗಳು ಇದರಲ್ಲಿ ಅಂತರ್ಗತವಾಗಿವೆ. ಆದ್ದರಿಂದ ಕನ್ನಡದ ಬಗ್ಗೆ ಮಕ್ಕಳು ಅಭಿಮಾನ ಬೆಳೆಸಿಕೊಳ್ಳಬೇಕು. ಆದರೆ ಅಂದಾಭಿಮಾನ ಬೇಡ ಎಂದು ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ| ವಿ.ಬಿ. ಅರ್ತಿಕಜೆ ಕಿವಿಮಾತು ಹೇಳಿದರು. ಪುತ್ತೂರಿನ ಹಾರಾಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ| ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಮತ್ತು ಹಾರಾಡಿ ಶಿವರಂಗದ ಆಶ್ರಯದಲ್ಲಿ ಮಂಗಳವಾರ ನಡೆದ ದ್ವಿತೀಯ ಮಕ್ಕಳ ಸಾಹಿತ್ಯ...







