Friday, March 13, 2026

archiveJana Mana Program

ಸುದ್ದಿ

ನಕಾರಾತ್ಮಕ ಧೋರಣೆಯಿಂದ ಹೊರಬಂದಾಗ ಯಶಸ್ಸು ಪ್ರಾಪ್ತಿ: ಶಾರದಾ ಕೊಡೆಂಕಿರಿ – ಕಹಳೆ ನ್ಯೂಸ್

ಪುತ್ತೂರು: ಮಹಿಳೆಯರು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವುದಕ್ಕೆ ಪ್ರಯತ್ನಿಸುವುದು ಅಗತ್ಯ. ಯಾವುದೇ ಕೆಲಸವನ್ನಾದರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಜೀವನದಲ್ಲಿ ಉನ್ನತಿಯನ್ನು ಕಾಣಬಹುದು. ತನ್ನಿಂದ ಸಾಧ್ಯವಾಗದು ಎಂಬ ನಕಾರಾತ್ಮಕ ಧೋರಣೆಯಿಂದ ಪ್ರತಿಯೊಬ್ಬರೂ ಹೊರಬಂದು, ಸಕಾರಾತ್ಮಕ ಚಿಂತನೆಗಳನ್ನು ಒಡಮೂಡಿಸಿಕೊಳ್ಳಬೇಕು ಎಂದು ಪುತ್ತೂರಿನ ಜ್ಞಾನಗಂಗಾ ಪ್ರಕಾಶನದ ಮಾಲಕಿ, ಲೇಖಕಿ ಶಾರದಾ ಕೊಡೆಂಕಿರಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುವ ಜನ ಮನ...