ವರದಕ್ಷಿಣೆ ಕಿರುಕುಳ: 6 ಮಂದಿ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್
ಉಡುಪಿ: ವರದಕ್ಷಿಣೆ ಕಿರುಕುಳ ಆರೋಪದಲ್ಲಿ ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರಿನ ಹಿನ್ನೆಲೆಯಲ್ಲಿ 6 ಮಂದಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಾದ ನೂರ್ ಜಹಾನ್ (37) ಅವರು ಮಹಮ್ಮದ್ ಮುಸ್ತಾಕ್ ಅವರನ್ನು ಬೆಳ್ತಂಗಡಿಯಲ್ಲಿ ಮದುವೆಯಾಗಿದ್ದು, ಮದುವೆ ಸಂದರ್ಭ 70 ಪವನ್ ಚಿನ್ನಾಭರಣ ಹಾಗೂ 75 ಸಾ.ರೂ. ವರದಕ್ಷಿಣೆ ನೀಡಲಾಗಿತ್ತು. ಬೆಳ್ತಂಗಡಿಯಲ್ಲಿ ವಾಸವಿದ್ದ ಮುಸ್ತಾಕ್ ಹೆಚ್ಚಿನ ವರದಕ್ಷಿಣೆಗಾಗಿ ನೂರ್ ಜಹಾನ್ ಅವರಿಗೆ ಮಾನಸಿಕ ಹಿಂಸೆ ನೀಡಿ, ದೈಹಿಕ ಹಲ್ಲೆ ನಡೆಸಿದ್ದಾರೆ. ಇತರ...
