Wednesday, March 11, 2026

archiveBus Driver

ಸುದ್ದಿ

ವಿದ್ಯಾರ್ಥಿಗಳಿಂದ ದೂರು: ಡ್ರೈವರ್‌ಗಳು ಮತ್ತು ಕಂಡಕ್ಟರ್‌ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕಿ – ಕಹಳೆ ನ್ಯೂಸ್

ಖಾನಾಪುರ: ಪಾಸ್‌ ಹೊಂದಿದ್ದ ವಿದ್ಯಾರ್ಥಿಗಳಿಗೆ ಬಸ್‌ ನಿಲ್ಲಿಸದೆ ಸತಾಯಿಸುತ್ತಿದ್ದ ಬಸ್‌ ಡ್ರೈವರ್‌ಗಳು ಮತ್ತು ಕಂಡಕ್ಟರ್‌ಗಳನ್ನು ಖಾನಾಪುರ ಶಾಸಕಿ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.  ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನಲೆಯಲ್ಲಿ ಬಸ್ಸುಗಳನ್ನು ಬೆನ್ನಟ್ಟಿದ ಶಾಸಕಿ ಬಸ್ಸನ್ನು ಅಡ್ಡಗಟ್ಟಿದ್ದು ಕಂಡಕ್ಟರ್‌ಗಳು ಮತ್ತು ಡ್ರೈವರ್‌ಗಳನ್ನು ಸಂಸ್ಪೆಂಡ್‌ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಸ್‌ಗಳು ಖಾಲಿ ಇದ್ದರೂ ಪಾಸ್‌ ಹೊಂದಿದ್ದ ವಿದ್ಯಾರ್ಥಿಗಳಿಗೆ ನಿಲ್ಲಿಸದೆ ಸಿಬ್ಬಂದಿಗಳು ಜನರನ್ನು ಮಾತ್ರ ಹತ್ತಿಸಿಕೊಳ್ಳುತ್ತಿದ್ದರು. ಇದರಿಂದಾ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿತ್ತು....