Tuesday, March 17, 2026

archiveBJP

ಸುದ್ದಿ

ಇಂದಿನಿಂದ `ಕೈ’ ಗೂಂಡಾಗಿರಿ ಖಂಡಿಸಿ ಬಿಜೆಪಿಯಿಂದ `ಬೆಂಗಳೂರು ರಕ್ಷಿಸಿ’ ಯಾತ್ರೆ – ಕಹಳೆ ನ್ಯೂಸ್

ಬೆಂಗಳೂರು: ನಲಪಾಡ್ ಗೂಂಡಾಗಿರಿ ಸೇರಿದಂತೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆಯ ಪ್ರಕರಣಗಳನ್ನು ಖಂಡಿಸಿ ಇಂದಿನಿಂದ ಬಿಜೆಪಿ ಬೆಂಗಳೂರು ರಕ್ಷಿಸಿ ಯಾತ್ರೆ ಆರಂಭಿಸಲಿದೆ. ಇಂದು ಬೆಳಗ್ಗೆ ಸುಮಾರು 9.30ಕ್ಕೆ ಬಸವನಗುಡಿ ಬಳಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಕ್ಷಾಯಾತ್ರೆಗೆ ಚಾಲನೆ ದೊರೆಯಲಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಲಿದ್ದಾರೆ. ಸಂಜೆ 4 ಗಂಟೆಗೆ...
ಸುದ್ದಿ

ಸಿದ್ದರಾಮಯ್ಯ ಸರ್ಕಾರವಲ್ಲ, ‘ಸೀದಾ ರೂಪಾಯಿ’ ಸರ್ಕಾರ – ದಾವಣಗೆರೆಯಲ್ಲಿ ಮೋದಿ ವ್ಯಂಗ್ಯ

ದಾವಣಗೆರೆ: ಕರ್ನಾಟಕದಲ್ಲಿರುವುದು ‘ಸಿದ್ದರಾಮಯ್ಯ’ ಸರ್ಕಾರವಲ್ಲ. ಇದು ‘ಸೀದಾ ರೂಪಾಯಿ’ ಸರ್ಕಾರ. ಈ ಸೀದಾ ರೂಪಾಯಿ ಸರ್ಕಾರ ನಿಮಗೆ ಬೇಕಾ..? ಇಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ‘ರೂಪಾಯಿ’ ಕೊಡದೆ ಕೆಲಸ ಆಗುವುದಿಲ್ಲ. ಕರ್ನಾಟಕಕ್ಕೆ ಇಂತಹ ಸರ್ಕಾರ ಶೋಭೆ ತರುವುದಿಲ್ಲ. ಕರ್ನಾಟಕಕ್ಕೆ ಜವಾಬ್ದಾರಿಯುತ, ಸಂವೇದನಾಶೀಲ, ಪ್ರಾಮಾಣಿಕ ಸರ್ಕಾರದ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಾವಣಗೆರೆಯಲ್ಲಿ ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕಕ್ಕೆ ಜನರ ದನಿ ಕೇಳುವ...
ಸುದ್ದಿ

ಬ್ರಾಹ್ಮಣರಿಂದ ಧರ್ಮ ಉಳಿದಿದೆ – ಯಡಿಯೂರಪ್ಪ

ಬೆಂಗಳೂರು: ಬ್ರಾಹ್ಮಣ ಸಮುದಾಯದಿಂದ ಈ ದೇಶದಲ್ಲಿ ಧರ್ಮ, ಆಚಾರ ವಿಚಾರ, ಸಂಸ್ಕೃತಿ ಉಳಿದಿದೆ. ಸಮಸ್ತ ಜೀವರಾಶಿಗೆ ಒಳಿತು ಬಯಸುವ ಸಮುದಾಯಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು. ಶನಿವಾರ ಸಂಜೆ ನಡೆದ ಗುರುವಂದನೆ ಹಾಗೂ ಸಾಧಕರಿಗೆ ಸನ್ಮಾನಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು. ನಮಗೆ ಮೀಸಲಾತಿ ಬೇಡ, ಸಮಾನತೆ ಬೇಕು ಎನ್ನುವ ಬ್ರಾಹ್ಮಣ ಮಹಾಸಭಾದ ನಿಲುವಿಗೆ ನನ್ನ ಸಹಮತವಿದೆ. ಇತರೆ ಸಮುದಾಯಗಳಂತೆ ಬ್ರಾಹ್ಮಣ ಸಮುದಾಯಕ್ಕೂ ಸವಲತ್ತು ಕೊಡುವುದು...
ಕ್ರೀಡೆಸುದ್ದಿ

ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಕು.ದಿಶಾ ಶೆಟ್ಟಿ ಬಳಗದವರಿಂದ ‘ ರಾಧಾ ವಿಲಾಸ ‘ | ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣ – ಕಹಳೆ ನ್ಯೂಸ್

ಉಡುಪಿ : ಪರ್ಕಳದ ಬಡದಬೆಟ್ಟು ಆಸನದ ಬಾಕ್ಯಾರಿನಲ್ಲಿ ಫೆ 25 ರಂದು ನಡೆಯುವ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶ, ಕಮಲ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಉದ್ಯಮಿ ಸುಬ್ರಾಯ ಆಚಾರ್ಯ ಬಡಗಬೆಟ್ಟು ಇವರು ಕ್ರೀಡಾಕೂಟದ ಉದ್ಘಾಟನೆಯನ್ನು ಬೆಳಗ್ಗೆ 8.00 ಗಂಟೆಗೆ ನಡೆಸಲಿದ್ದಾರೆ. ಸಂಜೆ 5.00 ಗಂಟೆಯಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ. ವಿಶೇಷ ಕಾರ್ಯಕ್ರಮ : ರಾಧಾ ವಿಲಾಸ Radha Vilasa by Disha Shetty &...
ಸುದ್ದಿ

ಬಿಜೆಪಿ ಮುಖಂಡ ಅಶೋಕ್ ರೈ ಸಾರಥ್ಯದಲ್ಲಿ 33 ನೇ ವರ್ಷದ ಉಪ್ಪಿನಂಗಡಿ ಕಂಬಳ – ಇದು ವಿಜಯೋತ್ಸವ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯ್ಯೂರಪ್ಪ ಭಾಗಿ – ಕಹಳೆ ನ್ಯೂಸ್

ಪುತ್ತೂರು : ಉಪ್ಪಿನಂಗಡಿಯ ಕೂಟೇಲು ನೇತ್ರಾವತಿ ನದಿ ಕಿನಾರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ 33 ನೇ ವರ್ಷದ ವಿಜಯ -ವಿಕ್ರಮ ಜೋಡುಕರೆ ಬಯಲು ಕಂಬಳವು ಫೆ. 24 ರಂದು ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ. ಕರಾವಳಿಯ ಭಾರಿ ಜನ ಸೇರುವ ಕಂಬಳಗಳಲ್ಲಿ ಇದು ಒಂದು ಎಂಬ ಸಾರ್ವರ್ತಿಕ ಮನ್ನಣೆ ಉಪ್ಪಿನಂಗಡಿಯ ಕಂಬಳಕ್ಕೆ ಪ್ರಾಪ್ತವಾಗಿದೆ. ಕಂಬಳಕ್ಕೆ ಇದ್ದ...
ಸುದ್ದಿ

ಮಂಗಳೂರಿನಲ್ಲಿ ಬಿಜೆಪಿಯವರೇ ಕಲ್ಲು ತೂರಾಟ ನಡೆಸಿದ್ದಾರೆ – ರಾಮಲಿಂಗಾ ರೆಡ್ಡಿ

ಮಂಗಳೂರು : ಬೇಂಗ್ರೆ ಎಂಬಲ್ಲಿ ಭಾರತ್ ಮಾತ ಕಿ ಜೈ ಘೋಷಣೆ ವಿಚಾರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆದಿದ್ದು, ಅಲ್ಲಿ ಬಿಜೆಪಿಯವರೇ ಕಲ್ಲು ತೂರಾಟ ನಡೆಸಿರಬಹುದು ಎಂದು ವಿಧಾನಸೌಧದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಅಮಿತ್ ಶಾ ಅವರೇ ಸುಳ್ಳು ಹೇಳುತ್ತಾರೆ. ಹೀಗಿರುವಾಗ ಬಿಜೆಪಿಯವರೇ ಕಲ್ಲು ತೂರಾಟ ನಡೆಸಿ ಸುಳ್ಳು ಹೇಳುತ್ತಿರಬಹುದು. ನಾನು ಈ ಬಗ್ಗೆ ವರದಿಯನ್ನು ತರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ರಾಮಲಿಂಗಾ ರೆಡ್ಡಿ ಹೇಳಿಕೆಗೆ ಶೆಟ್ಟರ್...
ಸುದ್ದಿ

ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳಿಂದ ಆಶೀರ್ವಾದ ಪಡೆದ ಬಿಜೆಪಿ ಚಾಣಕ್ಯ ಅಮಿತ್ ಶಾ – ಕಹಳೆ ನ್ಯೂಸ್

ಉಡುಪಿ : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಅಮಿತ್ ಶಾ ಉಡುಪಿಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಗೌರವಿಸಿದರು. ಉಡುಪಿಯಲ್ಲಿ ಅಷ್ಟಮಠಾಧೀಶರೂ ಸೇರಿದಂತೆ ಸಂತರನ್ನು ಭೇಟಿ ಮಾಡಿದ ಅಮಿತ್ ಶಾ, ಪೇಜಾವರ ಶ್ರೀ, ರಾಘವೇಶ್ವರ ಶ್ರೀ ಸೇರಿದಂತೆ ಸಂತರ ಜೊತೆ ಮಾತುಕತೆ ನಡೆಸಿ, ಸಂತರನ್ನು ಗೌರವಿಸಿದರು. ರಾಘವೇಶ್ವರ ಶ್ರೀಗಳು ಚಾಣಕ್ಯನಿಗೆ ಅಭಯ ಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು. ವರದಿ : ಕಹಳೆ ನ್ಯೂಸ್...
ಸುದ್ದಿ

ಕರ್ನಾಟಕ ಮೂರು ಮಾಫಿಯಾಗಳಿಂದ ಮುಕ್ತಗೊಳಿಸಬೇಕಿದೆ, ಸುರತ್ಕಲ್ ನಲ್ಲಿ – ಅಮಿತ್ ಶಾ

ಮಂಗಳೂರು: ರಾಜ್ಯದಲ್ಲಿ ಗೂಂಡಾ ಸರ್ಕಾರ ಆಳ್ವಿಕೆಯಲ್ಲಿದೆ. ಈ ಗೂಂಡಾ ಸರ್ಕಾರ ಅಂತ್ಯವಾಗಬೇಕಿದೆ. ಸಿಎಂ ಹಾಗೂ ಈ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯದ ಜನ ವಿಧಾನಸಭಾ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಶಾ ಅವರು ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಮೂರು ಮಾಫಿಯಾಗಳಿಂದ ಮುಕ್ತಿಗೊಳ್ಳಬೇಕಿದೆ...
1 5 6 7 8 9
Page 7 of 9