ಭಾವನಾತ್ಮಕವಾಗಿ ಜನರನ್ನು ಮರಳು ಮಾಡಿ ಮತ ಹಾಕಿಸಿದ್ದರಿಂದ ನನಗೆ ಸೋಲಾಯಿತು: ರಮಾನಾಥ ರೈ – ಕಹಳೆ ನ್ಯೂಸ್
ಮಂಗಳೂರು: ಕಾಂಗ್ರೆಸ್ ಪಕ್ಷ ಬಂಟ್ವಾಳದಲ್ಲಿ ದುರ್ಬಲವಾಗಿಲ್ಲ. ಧರ್ಮ ರಕ್ಷಣೆ ಹೆಸರಲ್ಲಿ ಬಿಜೆಪಿಯವ್ರು ಜನರನ್ನು ವಂಚಿಸಿದರು. ಭಾವನಾತ್ಮಕವಾಗಿ ಜನರನ್ನು ಮರಳು ಮಾಡಿ ಮತ ಹಾಕಿಸಿದ್ದರಿಂದ ನನಗೆ ಸೋಲಾಯಿತು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಭಾವುಕರಾಗಿ ನುಡಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ನನ್ನ ಅಭಿವೃದ್ಧಿ ಕೆಲಸದ ಮಾಲ್ಯಮಾಪನ ಆಗುತ್ತೆ ಎಂದು ತಿಳಿದಿದ್ದೆ. ಆದ್ರೆ ಮಾಲ್ಯಮಾಪನ ಆಗಲಿಲ್ಲ. ಅನೇಕ...







