Friday, March 20, 2026

ಸುದ್ದಿ

ರಾಜ್ಯಸುದ್ದಿ

 ಮತ್ತೊಂದು ಬಸ್ ದುರಂತ : ಲಾರಿಗೆ ಬಸ್ ಡಿಕ್ಕಿಯಾಗಿ 11 ಮಂದಿ ಸ್ಥಳದಲ್ಲೇ ಸಾವು. – ಕಹಳೆ ನ್ಯೂಸ್

ಬ್ರೆಜಿಲ್: ಫೆಡರಲ್ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಏಳು ಜನರು ಗಾಯಗೊಂಡಿದ್ದಾರೆ. ಬ್ರೆಜಿಲ್‌ನ ಫೆಡರಲ್ ಹೆದ್ದಾರಿ ಪೊಲೀಸರ ಪ್ರಕಾರ, ದಕ್ಷಿಣದ ತುದಿಯಲ್ಲಿರುವ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದ ಫೆಡರಲ್ ಹೆದ್ದಾರಿಯಲ್ಲಿ ಸ್ಥಳೀಯ ಸಮಯ ಬೆಳಿಗ್ಗೆ 11.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ತುರ್ತು ಪ್ರತಿಕ್ರಿಯೆ ನೀಡುವವರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿದರು....
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿನ ಶಾಲಾ ವಾರ್ಷಿಕೋತ್ಸವ ಹಾಗೂ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರ ಕಾರ್ಯಕ್ರಮ -ಕಹಳೆ ನ್ಯೂಸ್

ಕಲ್ಲಡ್ಕ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಊರ ಹಿರಿಯರಾದ ರಾಮಚಂದ್ರ ಬನ್ನಿಂತ್ತಾಯ ಚನಿಲ ನೆಟ್ಲ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಅಧ್ಯಕ್ಷರಾದ ರೊ.ದಿವಾಕರ ಶೆಟ್ಟಿ, ಝೋನ್...
ಉಡುಪಿಜಿಲ್ಲೆಸುದ್ದಿ

ಉಡುಪಿ: ರಿವರ್ಸ್ ತೆಗೆಯುವ ವೇಳೆ ಒಮ್ಮೇಲೆ ಹಿಮ್ಮುಖವಾಗಿ ಚಲಿಸಿದ ಕಾರು :ಇಬ್ಬರಿಗೆ ಗಾಯ – ಕಹಳೆ ನ್ಯೂಸ್

ಉಡುಪಿ: ರಿವರ್ಸ್ ತೆಗೆಯುವ ವೇಳೆ ಚಾಲಕ ನಿಯಂತ್ರಣದ ತಪ್ಪಿದ ಕಾರೊಂದು ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಉಡುಪಿ ಜಾಮೀಯಾ ಮಸೀದಿ ಸಮೀಪದ ಐರೋಡಿ ಬಿಲ್ಡಿಂಗ್ ಬಳಿ ಸಂಭವಿಸಿದೆ. ನಗರದ ಐರೋಡಿ ಬಿಲ್ಡಿಂಗ್ ನಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ರಿವರ್ಸ್ ತೆಗೆಯುವ ವೇಳೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಅತೀ ವೇಗದಿಂದ ಪರಿವಾರ್ ಸ್ವೀಟ್ ಅಂಗಡಿಯ ಕಡೆಗೆ ಹಿಮ್ಮುಖವಾಗಿ...
ಬೆಂಗಳೂರುರಾಜ್ಯಸುದ್ದಿ

ನಾನು ಕಾರಿಂದ ಇಳಿತಿದ್ದಂಗೆ ಫೈರಿಂಗ್ ಮಾಡಿದ್ರು: ಅಚ್ಚರಿ ಹೇಳಿಕೆ ನೀಡಿದ ಜನಾರ್ದನ್‌ ರೆಡ್ಡಿ – ಕಹಳೆ ನ್ಯೂಸ್

ಬಳ್ಳಾರಿ: ಬಳ್ಳಾರಿಯಲ್ಲಿ ರಾತ್ರೋರಾತ್ರಿ ನಡೆದ ಬ್ಯಾನರ್‌ ಗಲಾಟೆಯ ನಡುವೆ ಗುಂಡಿನ ದಾಳಿ ಪ್ರಕರಣ ಇದೀಗ ರಾಜಕೀಯ ಯುದ್ಧಕ್ಕೆ ಕಾರಣವಾಗಿದೆ. ಸದ್ಯ ಬ್ಯಾನರ್‌ ಗಲಾಟೆ ಸದ್ಯ ಕೈ-ಕಮಲ ಪಾಳಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದು, ಬ್ಯಾನರ್‌ ಘರ್ಷಣೆ ಕುರಿತು ಮಾಜಿ ಸಚಿವ ಜನಾರ್ದನ ರೆಡ್ಡಿ ತುರ್ತು ಸುದ್ದಿಗೋಷ್ಠಿ ನಡೆಸಿ ಶಾಸಕ ಭರತ್ ರೆಡ್ಡಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಇಂದು ( ಶುಕ್ರವಾರ) ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಜನಾರ್ದನ ರೆಡ್ಡಿ...
ಬೆಂಗಳೂರುರಾಜ್ಯಸುದ್ದಿ

ಉಗ್ರನಿಗೆ ನೆರವು ಪ್ರಕರಣ: ASI ಚಾಂದ್ ಪಾಷಾ ಸೇರಿದಂತೆ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ – ಕಹಳೆ ನ್ಯೂಸ್

ಬೆಂಗಳೂರು: ಉಗ್ರ ನಾಸಿರ್ ಗೆ ಜೈಲಿನಲ್ಲಿ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಎನ್ ಐಎ ಅಧಿಕಾರಿಗಳು ಎಎಸ್‌ಐ ಚಾಂದ್ ಪಾಷ ಸೇರಿದಂತೆ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರೋಪ ಪಟ್ಟಿಯಲ್ಲಿ ಆರೋಪಿಗಳ ಪಾತ್ರದ ಬಗ್ಗೆ ಉಲ್ಲೇಖಿಸಿದ್ದು, ಸಿಎಆರ್ ಎಎಸ್‌ಐ ಚಾಂದ್ ಪಾಷಾ, ಅನಿಸಾ ಫಾತಿಮಾ, ಡಾ.ನಾಗರಾಜ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಹಿಂದೆ ಪರಾರುಯಾಗಿದ್ದ ಜುನದ್ ಸೇರಿದಂತೆ ೯ ಜನರ ವಿರುದ್ಧ ಚಾರ್ಜ್ ಶೀಟ್...
ಸುದ್ದಿ

ಕಾಪು: ಉದ್ಯಾವರ ಸೇತುವೆಗೆ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲೇ ಮೃತ್ಯು- ಕಹಳೆ ನ್ಯೂಸ್

ಉಡುಪಿ: ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಗೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಸುಕಿನ ವೇಳೆ 2:30ರ ಸುಮಾರಿಗೆ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯದ ಯುವರಾಜ್ ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಬೈಕ್ ಅತಿ ವೇಗ ಹಾಗೂ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಯುವರಾಜ ಸ್ಥಳದಲ್ಲೇ ಮೃತಪಟ್ಟರು...
ಬೆಂಗಳೂರುರಾಜ್ಯಸುದ್ದಿ

ಮಾರ್ಚ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ‘ಬಜೆಟ್’ ಮಂಡನೆ : ಸಚಿವ ಸತೀಶ್ ಜಾರಕಿಹೊಳಿ – ಕಹಳೆ ನ್ಯೂಸ್

ಬೆಂಗಳೂರು : ಮಾರ್ಚ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ' ಬಜೆಟ್ ಪೂರ್ವಭಾವಿ ಸಭೆ ವಿಳಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ. ಮಾರ್ಚ್ ತಿಂಗಳಿನಲ್ಲಿ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿದರು. ಬಳ್ಳಾರಿ ಗಲಾಟೆ ಕುರಿತು ಮಾತನಾಡಿದ ಸಚಿವರು ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆಯಾಗಿ...
ದಕ್ಷಿಣ ಕನ್ನಡಸುದ್ದಿ

ಗಡಿಪಾರು ಆದೇಶದ ಆರೋಪಿಗೆ ಪುಣಚದಲ್ಲಿ ಆಶ್ರಯ ನೀಡಿದ ವ್ಯಕ್ತಿ ವಿಟ್ಲ ಪೊಲೀಸರ ಬಲೆಗೆ.. : ರೌಡಿ ಶೀಟರ್ ಬಂಧನಕ್ಕಾಗಿ ಪೊಲೀಸರಿಂದ ತೀವ್ರ ಶೋಧ – ಕಹಳೆ ನ್ಯೂಸ್

ಠಾಣಾ ವ್ಯಾಪ್ತಿಯಲ್ಲಿ ಗಡಿಪಾರು ಆದೇಶವಿರುವ ರೌಡಿಯೊಬ್ಬನಿಗೆ ಪೊಲೀಸರ ಬಂಧನವಾಗದAತೆ ಆಶ್ರಯ ನೀಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪುಣಚ ಗ್ರಾಮದ ಕಲ್ಲಾಜೆ ಎಂಬಲ್ಲಿ ದಾಳಿ ನಡೆಸಿದಾಗ ರೌಡಿ ಶೀಟರ್ ಪರಾರಿಯಾಗಿದ್ದು, ಆಶ್ರಯ ನೀಡಿದ ನಿವಾಸಿ ಉದಯ ರೈ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ಗಂಭೀರ ಪ್ರಕರಣಗಳ ಆರೋಪಿ, ರೌಡಿ ಶೀಟರ್ ಕೇಪು ಗಣೇಶ್ ಎಂಬಾತನಿಗೆ ಗಡೀಪಾರು ಆದೇಶವಾಗಿತ್ತು. ಬಂಧನಕ್ಕೆ ಬೆದರಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ...
1 95 96 97 98 99 3,298
Page 97 of 3298