ಸರಸ್ವತೀ ಪೂಜೆ ಹಾಗೂ ವಿದ್ಯಾರಂಭ – ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ
ಬದಿಯಡ್ಕ : ಗುರುಶಿಷ್ಯ ಬಾಂಧವ್ಯದ ಪ್ರತೀಕ-ಕಲಿಸಿದ ಎರಡಕ್ಷರದಿಂದ ಜೀವನದ ಧನ್ಯತಾ ಭಾವ. ವಿದ್ಯಾಧಿ ದೇವತೆಯ ಸಮ್ಮುಖದಲ್ಲಿ ಗೋಚರಿಸಲ್ಪಟ್ಟು ಮುಗ್ದವಾಗಿರುವ ಮುದ್ದುಮಕ್ಕಳನ್ನು ಬಿದ್ದಲ್ಲಿಂದ ಎಬ್ಬಿಸಿ ಪ್ರೌಢಾವಸ್ಥೆಗೆ ತಲುಪಿಸುವ ಸಮಾಜದಲ್ಲಿ ಸುಸಂಸ್ಕೃತ ಜೀವನವನ್ನು ನಡೆಸಲು ಬೇಕಾದ, ಎಲ್ಲಾ ವಿಧದ ಮಾರ್ಗದರ್ಶನಗಳನ್ನು ನೀಡುವ ಮಹತ್ಕಾರ್ಯವನ್ನು ಹೊತ್ತಿರುವ ಆಚಾರ್ಯವೃಂದಕ್ಕೆ ಧನ್ಯತಾ ಭಾವದೊಂದಿಗೆ ನಮಿಸುತ್ತಿರುವ ಈ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅಭಿಪ್ರಾಯಟ್ಟರು. ಅವರು ಶನಿವಾರ ಬದಿಯಡ್ಕ ಶ್ರೀ ಭಾರತೀ...
