ಕೈ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ರಮ್ಯ | ಸಿದ್ದುಗೆ ಕಾಂಗ್ರೆಸ್ ಗುದ್ದು.
ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸಂಸದೆ ರಮ್ಯಾ ಸದ್ಯದಲ್ಲೇ ರಾಜ್ಯ ರಾಜಕಾರಣ ವಾಪಸ್ ಬರುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ರಮ್ಯಾ ಗೆ ವಿಧಾನಸಭೆ ಹೊಸ್ತಿಲಲ್ಲಿರುವ ಕರ್ನಾಟಕದ ಕೆಪಿಸಿಸಿ ಕಾರ್ಯಕಾರಣಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಸೋಮವಾರ ಬಿಡುಗಡೆ ಮಾಡಲಾದ 94 ನೂತನ ಕಾರ್ಯಕಾರಣಿ ಸದಸ್ಯರ ಪಟ್ಟಿಯಲ್ಲಿ ರಮ್ಯಾ ಅವರಿಗೂ ಸ್ಥಾನ ನೀಡಲಾಗಿದ್ದು ಮಂಡ್ಯ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಲಾಗಿದೆ....







