Friday, March 13, 2026

ಸುದ್ದಿ

ಸುದ್ದಿ

ಕಂಬಳಕ್ಕೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಕಾರ | ಸಂಪೂರ್ಣ ನ್ಯಾಯ ದೊರಕುವವರೆಗೂ ಹೋರಾಟ – ಅಶೋಕ್ ರೈ.

ನವದೆಹಲಿ: ಕರ್ನಾಟಕದ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ.ಕಂಬಳಕ್ಕೆ ಅವಕಾಶ ನೀಡುವ ಕರ್ನಾಟಕದ ಕಾಯ್ದೆಗೆ ತಡೆ ಕೋರಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಆಫ್ ಎನಿಮಲ್ಸ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತಡೆ ನೀಡಲು ನಿರಾಕರಿಸಿದೆ.ಈ ಸಂಬಂಧ ಕರ್ನಾಟಕ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್​ನೀಡಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ನವೆಂಬರ್​ 13 ಕ್ಕೆ ನಿಗದಿಪಡಿಸಿದೆ. ಅಲ್ಲದೆ ಮುಂದಿನ ವಿಚಾರಣೆಯ...
ಸುದ್ದಿ

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ಪಟ್ಟಿಗೆ ಸೇರ್ಪಡೆ | ಭಕ್ತರಲ್ಲಿ ಸಂತಸ.

ತುಮಕೂರು : ನಡೆದಾಡುವ ದೇವರೆಂದೇ ಖ್ಯಾತರಾದ ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆ ಸೇರಲಿದೆ. ಸಿದ್ದಗಂಗಾ ಶ್ರೀಗಳ ಆಧ್ಯಾತ್ಮಿ ಹಾಗೂ ಸಮಾಜ ಸೇವಾಕಾರ್ಯಗಳನ್ನು ಅಂಕಿ ಅಂಶ ಸಮೇತ ಸಿದ್ದಗಂಗಾ ಮಠದ ನಿವೃತ್ತ ಪ್ರಾಂಶುಪಾಲರೊಬ್ಬರು ಸಂಗ್ರಹಿಸಿದ್ದು ಅವುಗಳನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕೆಲವೇ ದಿಗಳಲ್ಲಿ ಸಲ್ಲಿಸಲಿದ್ದಾರೆ. ಮಠದ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಕಲೆ ಹಾಕಿರುವ ಅಂಕಿ ಅಂಶ ಈ ರೀತಿ ಇವೆ. ಶ್ರಿಗಳು ದೀಕ್ಷೆ ಪಡೆದು 88 ವರ್ಷಗಳಾಗಿವೆ,...
ಸುದ್ದಿ

ದೇಶದ ರಕ್ಷಣೆಯಲ್ಲಿ ಆರ್.ಎಸ್.ಎಸ್. ಪಾತ್ರ ಮಹತ್ವದ್ದು | ಸಂಘ ದೇಶ ಕಟ್ಟಿದೆ – ಕಲ್ಲಡ್ಕ ಪ್ರಭಾಕರ್ ಭಟ್.

ಮೈಸೂರು : ರಾಜೇಂದ್ರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಸಂಚಲನದ ಸಭಾ ಕಾರ್ಯಕ್ರಮದಲ್ಲಿ ಭೌದಿಕ್ ನೆರವೇರಿಸಿದ ಆರ್.ಎಸ್.ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಧರ್ಮ. ಹಿಂದೂಗಳು ಶಾಂತಿ ಪ್ರಿಯರು, ಆರ್.ಎಸ್.ಎಸ್. ಕಳೆದ ಹತ್ತಾರು ವರ್ಷಗಳಿಂದ ದೇಶ ಸಂರಕ್ಷಣೆಯ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಸಂಘದ ದೇಶ ಕಟ್ಟಿದೆ ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಸುಮಾರು ೭೫೦ ಸಂಖ್ಯೆ ಪೂರ್ಣ ಗಣವೇಷಧಾರಿ ಸ್ವಯಂಸೇವಕರಿಂದ...
ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ದೈವ ಕೊರಗಜ್ಜನ ಅವಹೇಳನ | ದೈವ ಸನ್ನಿದಿಯಲ್ಲಿ ಕ್ಷಮೆಯಾಚಿಸಿದ ಮನೋಜ್.

ಮಂಗಳೂರು : ಕೆಲವು ದಿನಗಳ ಹಿಂದೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮನೋಜ್ ಪಂಡಿತ್ ಎಂಬಾತ ಇದೀಗ ಕ್ಷಮಾಪಣೆ ಕೇಳಿದ್ದಾನೆ. ಕೊರಗಜ್ಜನನ್ನು ನಿಂದಿಸಿದ್ದ ಮನೋಜ್ ಪಂಡಿತ್ ಎಂಬಾತ ನಿನ್ನೆ ವಜ್ರದೇಹಿ ಶ್ರೀಗಳ ಸಾರತ್ಯದ ಹಿಂದೂ ಸಂರಕ್ಷಣಾ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಶ್ರೀ ಕೊರಗಜ್ಜ ದೈವಸ್ಥಾನಕ್ಕೆ ಬಂದು ತಾನು ಮಾಡಿದ ತಪ್ಪು ತನಗೆ ಅರಿವಾಗಿದ್ದು, ಈ ಬಗ್ಗೆ ಕ್ಷಮೆ ಯಾಚಿಸಿದ್ದಾನೆ. ಕೊರಗಜ್ಜ...
ಸುದ್ದಿ

ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆ | ಪುತ್ತೂರು ತಾಲ್ಲೂಕಿನಾದ್ಯಾಂತ ಬಿ.ಜೆ.ಪಿ. ಕಾರ್ಯಕರ್ತರನ್ನು ಸಂಘಟಿಸುತ್ತಿರುವ ಅಶೋಕ್ ರೈ.

ಪುತ್ತೂರು : ಬಿಜೆಪಿ ಪೆರ್ನೆ-ಬಿಳಿಯೂರು ಗ್ರಾಮ ಸಮಿತಿಯ ವತಿಯಿಂದ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯು ಕಡಂಬು ಶ್ರೀ ರಾಮ ಭಜನಾಮಂದಿರದಲ್ಲಿ ನಡೆಯಿತು.ಪರಿವರ್ತನಾ ಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು. ಗ್ರಾಮ ಗ್ರಾಮಗಲ್ಲಿ ಬಿ.ಜೆ.ಪಿ.ಯ ಕಾರ್ಯರ್ತರನ್ನು ಸಂಘಟಿಸಿ, ಈ ಬಾರಿಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪುತ್ತೂರು ತಾಲ್ಲೂಕಿನ ಬಿ.ಜೆ.ಪಿ.ಯ ಮುಂದಾಳತ್ವ ವಹಿಸಿದ್ದಾರೆ. ವೇದಿಕೆಯಲ್ಲಿ ಗ್ರಾಮಾಂತರ ಯುವಮೋರ್ಚಾ ಅಧ್ಯಕ್ಷ...
ಸುದ್ದಿ

ಮೇಯರ್ ಹೊಟ್ಟೆಗೆ ಸಿಎಂ ಪಂಚ್ | ಸಭ್ಯತೆಯ ಎಲ್ಲೆ ಮೀರಿದ ಸಿಎಂ ವಿರುದ್ಧ ವ್ಯಾಪಕ ಖಂಡನೆ.

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರಿಗೆ ಕರಾಟೆ ಪಂಚ್‌ ನೀಡಿರುವ ಫೋಟೋ ವಿಡಿಯೋಗಳು ಇದೀಗ ಫ‌ುಲ್‌ ವೈರಲ್‌ ಆಗಿವೆ. ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಇಂಡಿಯನ್‌ ಕರಾಟೆ ಚಾಂಪಿಯನ್‌ಶಿಪ್‌ 2017 ರ ಉದ್‌ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಕರಾಟೆ ಪಟುವಾಗಿರುವ ಮೇಯರ್‌ ಕವಿತಾ ಸನಿಲ್‌ ಅವರು ಸಿಎಂಗೆ 2 ಪಂಚ್‌ ನೀಡಿದರೆ ಮುಖ್ಯಮಂತ್ರಿಗಳೂ ತಿರುಗೇಟು ನೀಡಿ ಮೇಯರ್‌ ಹೊಟ್ಟೆಗೆ ಪಂಚ್‌...
ಸುದ್ದಿ

ಕಂಬಳಕ್ಕೆ ಮತ್ತೆ ಕಂಟಕ | ಇದು ನಮಗೆ ಸವಾಲು, ಜಾನಪದ ಕ್ರೀಡೆ ಅಳಿಯಲು ಬಿಡುವುದಿಲ್ಲ – ಅಶೋಕ್ ಕುಮಾರ್ ರೈ

ಪುತ್ತೂರು : ಕಂಬಳ ತುಳುನಾಡಿದ ಜಾನಪದ ಕ್ರೀಡೆ. ಇದನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಾಣಿದಯಾ ಸಂಘವು ಈ ಹಿಂದೆ ಕೋರ್ಟ್ ಗಳಲ್ಲಿ ದಾವೆ ಹೂಡಿತ್ತು ಆದರೆ, ಆ ಸಂದರ್ಭದಲ್ಲಿ ಅದು ತಿರಸ್ಕೃತ ಗೊಂಡಿತ್ತು. ಆದರೆ, ಈಗ ಮತ್ತೆ ಕಂಬಳ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಪ್ರಾಣಿ ದಯಾ ಸಂಘ. ತುಳುನಾಡ ಜಾನಪದ ಕ್ರೀಡೆ ಉಳಿವಿಗಾಗಿ ಕಾನೂನು ಹೋರಾಟ. ಪ್ರಾಣಿ ದಯಾಸಂಘದ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಉಪ್ಪಿನಂಗಡಿ...
ಸುದ್ದಿ

ಕ್ಯಾ.ಕಾರ್ಣಿಕ್ ಕಣಕ್ಕಿಳಿಯಲ್ಲ, ಅಭ್ಯರ್ಥಿಗಳು ಯಾರು? | ಗೆಲ್ಲುವ ಕುದುರೆಯ ಬೆನ್ನುಹತ್ತಿದ ರಾಜಕೀಯ ಪಕ್ಷಗಳು.

ಮಂಗಳೂರು : ವಿಧಾನಪರಿಷತ್ತು ಚುನಾವಣೆ ಸಮೀಪಿಸಿದಂತೆ ದಕ್ಷಿಣ ಕನ್ನಡದಲ್ಲಿ ರಾಜಕೀಯ ಪಕ್ಷಗಳು ಭರದ ಸಿದ್ಧತೆಯಲ್ಲಿದೆ. ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿ ಮೂರು ಪಕ್ಷಗಳು ಮುಂದಾಗಿದೆ. ಕಾಂಗ್ರೆಸ್ ಮತ್ತು ಜೇಡಿಎಸ್ ಈಗಾಗಲೇ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಳುಸಿ ತಮ್ಮ ಅಭ್ಯರ್ಥಿಗಳನ್ನು ನಿಚ್ಛಯ ಮಾಡಿದೆ. ಕಾಂಗ್ರೆಸ್ ನಿಂದ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾದ ಮಂಜುನಾಥ ಕಣ್ಣಕ್ಕಿಳಿಯುವುದು ಬಹುತೇಕ ಖಚಿತ. ಜೇಡಿಎಸ್ ನಿಂದ ಬೋಜೆಗೌಡರೇ ಅಭ್ಯರ್ಥಿ. ಇನ್ನೂಳಿದಂತೆ ಬಿ.ಜೆ.ಪಿ. ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ,...
1 3,261 3,262 3,263 3,264 3,265 3,289
Page 3263 of 3289