ನಾಳೆ ಖಾಸಗಿ ಆಸ್ಪತ್ರೆ ಓಪಿಡಿ ಬಂದ್ | ರಾಜ್ಯಾದ್ಯಾಂತ ವೈದ್ಯರ ಸಾಮೂಹಿಕ ಮುಷ್ಕರ
ಬೆಂಗಳೂರು : ಖಾಸಗಿ ಆಸ್ಪತ್ರೆಗಳ ವೈದ್ಯರ ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟ ಮುಂದುವರಿದಿದ್ದು, ನಾಳೆಯಿಂದ(ಗುರುವಾರ) ಆರು ಸಾವಿರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ. ನಾಳೆ ಬೆಳಗ್ಗೆ 8ಗಂಟೆಯಿಂದ ಖಾಸಗಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಬಂದ್ ಆಗಲಿದ್ದು, ಎಮರ್ಜೆನ್ಸಿ ಚಿಕಿತ್ಸೆಗಳು ಎಂದಿನಂತೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಬೆಳಗಾವಿಯಲ್ಲಿ ವೈದ್ಯರುಗಳು ತೀವ್ರ ಪ್ರತಿಭಟನೆ...







